ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಹಾಗೂ ಮಾತೇ ಸಾವಿತ್ರಿಬಾಯಿ ಫುಲೆ ಇಬ್ಬರ ಭಾವಚಿತ್ರಗಳಿಗೂ ಪುಷ್ಪನಮನಕ್ಕೆ ಸಿದ್ದತೆ -ಸಂತಸ ವ್ಯಕ್ತಪಡಿಸಿದ ಡಾ.ಲತಾ ಎಸ್.ಮುಳ್ಳೂರ

ಸೆಪ್ಟಂಬರ್ 05-
ರಾಜ್ಯ ಮಟ್ಟದ ಸರ್ಕಾರಿ ಕಾರ್ಯಕ್ರಮ ಶಿಕ್ಷಕರ ದಿನಾಚರಣೆಯಂದು ಡಾ.ಸರ್ವಪಲ್ಲಿ ರಾಧಾಕೃಷ್ಣ ನ್ ಹಾಗೂ ಮಾತೆ ಸಾವಿತ್ರಿಬಾಯಿ ಫುಲೆ ರವರ ಇಬ್ಬರ ಭಾವಚಿತ್ರ ಗಳಿಗೂ ಮಾನ್ಯ ಮುಖ್ಯಮಂತ್ರಿ ಗಳು ಪುಷ್ಪನಮನ ಸಲ್ಲಿಸುವ ವಿಷಯವನ್ನು ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ಕಂಡು ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಶನ್ ನ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ರಾಜ್ಯಾಧ್ಯಕ್ಷರಾದ ಡಾ.ಲತಾ.ಎಸ್.ಮುಳ್ಳೂರ ರವರು ಸಂತೋಷ ವ್ಯಕ್ತಪಡಿಸಿದ್ದಾರೆ.ಕಳೆದ ವರ್ಷದ ಶಿಕ್ಷಕರ ದಿನಾಚರಣೆಯಂದು ಸಹಾ ಮಾನ್ಯ ಮುಖ್ಯಮಂತ್ರಿಗಳು ಎರಡೂ ಭಾವಚಿತ್ರಗಳಿಗೂ ಪುಷ್ಪನಮನ ಸಲ್ಲಿಸಿದ್ದನ್ನು ಅವರು ಇಂದು ಸ್ಮರಿಸಿದ್ದಾರೆ.ಅಲ್ಲದೇ ಅದೇ ಕಾರ್ಯಕ್ರಮದಲ್ಲಿ ಮಾತೇ ಸಾವಿತ್ರಿಬಾಯಿ ಫುಲೆ ಹೆಸರಿನಲ್ಲಿ ರಾಜ್ಯ ಮಟ್ಟದಲ್ಲಿ ಸಾಧನೆಗೈದ ಹಲವು ಅತ್ಯುತ್ತಮ ಶಿಕ್ಷಕಿಯರನ್ನು ಗುರ್ತಿಸಿ ರಾಜ್ಯ ಪ್ರಶಸ್ತಿ ಕೂಡ ನೀಡಿ ಸನ್ಮಾನಿಸಿಲಾಗಿತ್ತು ಎಂದರು.

ಕಳೆದ ವರ್ಷದ ಶಿಕ್ಷಕರ ದಿನಾಚರಣೆಯ ಸವಿನೆನಪು

ದೇಶದ ಪ್ರಪ್ರಥಮ ಉಪರಾಷ್ಟ್ರಪತಿಗಳಾಗಿ, ಎರಡನೇ ರಾಷ್ಟ್ರಪತಿಗಳಾಗಿ ಶ್ರೇಷ್ಠ ಶಿಕ್ಷಣ ತಜ್ಞರಾಗಿ ಹಲವು ಶಿಕ್ಷಣ ಸುಧಾರಣೆ ತಂದಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮ ದಿನಾಚರಣೆಯ ಅಂಗವಾಗಿ ಆಚರಿಸುವ ಶಿಕ್ಷಕರ ದಿನಾಚರಣೆಯಂದು ಭಾರತದ ಮೊಟ್ಟ ಮೊದಲ ಶಿಕ್ಷಕಿ,ಜ್ಞಾನ ಜ್ಯೋತಿ,ಮಹಿಳಾ ಚಿಂತಕಿ, ಮಾತೇ ಸಾವಿತ್ರಿಬಾಯಿ ಫುಲೆ ರವರನ್ನು ಸಹಾ ನೆನೆಯುವ ಸಲುವಾಗಿ ಮಾತೆಯ ಭಾವಚಿತ್ರಕ್ಕೂ ಪುಷ್ಪನಮನ ಸಲ್ಲಿಸುತ್ತಿರುವುದು ನಮ್ಮೆಲ್ಲರಿಗೂ ಅತೀವ ಸಂತಸ ತಂದಿದೆ. ಅಂತೆಯೇ ಪ್ರತೀ ಜಿಲ್ಲಾ ಹಾಗೂ ತಾಲ್ಲೂಕು ಕಾರ್ಯಕ್ರಮದಲ್ಲೂ ಸಹಾ ಇದೇ ರೀತಿಯಾಗಿ ಎರಡೂ ಭಾವಚಿತ್ರಗಳನ್ನೂ ಇಟ್ಟು ನೆನೆಯುವ ಗೌರವಿಸುವ ಮೂಲಕ ಪುಷ್ಪನಮನ ಸಲ್ಲಿಸಬೇಕು ಎಂದು ಆಶಯ ವ್ಯಕ್ತಪಡಿಸಿದ್ದಾರೆ

Published by ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯಘಟಕ ಧಾರವಾಡ

ರಾಜ್ಯದ ಸರ್ಕಾರಿ,ಅನುದಾನಿತ, ಪ್ರಾಥಮಿಕ, ಪದವೀಧರ, ಹಾಗೂ ಪ್ರೌಢಶಾಲಾ ಶಿಕ್ಷಕಿಯರನ್ನೊಳಗೊಂಡ ಏಕೈಕ‌ ಸಂಘ

Leave a comment