ರಾಮನಗರ-ಜು.31 ಕರ್ನಾಟಕ ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘ ರಾಜ್ಯ ಘಟಕ ಧಾರವಾಡ ಜಿಲ್ಲಾ ಘಟಕ ರಾಮನಗರ ದಿನಾಂಕ 31/7/22ರಂದು “ಶಾನ್” ಥಿಯೇಟರ್ ನಲ್ಲಿ “ಸಾವಿತ್ರಿ ಬಾಯಿ ಫುಲೆ” ಚಲನಚಿತ್ರದ ವಿಶೇಷ ಪ್ರದರ್ಶನ ಮಾಡಲಾಯಿತು. ಚಲನಚಿತ್ರ ವೀಕ್ಷಿಸಿದ ವೀಕ್ಷಕರು ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದರು.ಸಾವಿತ್ರಿ ಬಾಯಿ ಫುಲೆ ಯವರ ಆದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಂಡು ಸಮಾಜಮುಖಿ ಕಾರ್ಯಗಳನ್ನು ಮಾಡಿದಲ್ಲಿ ದೇಶದ ಪ್ರಗತಿ ಉತ್ತುಂಗ ಕ್ಕೇರುವುದರಲ್ಲಿ ಸಂಶಯವಿಲ್ಲ ಎಂದು ವ್ಯಕ್ತಪಡಿಸಿದರು. ಇಂತಹ ಒಂದು ಉತ್ತಮ ಚಲನಚಿತ್ರ ನೀಡಿದ ನಿರ್ದೇಶಕ ರಿಗೂ,ನಿರ್ಮಾಪಕರಿಗೂ, ಅಭಿನಯಿಸಿದ ಎಲ್ಲಾ ತಾರಾಬಳಗಕ್ಕೂ ಸಂಘದಪರವಾಗಿ ಧನ್ಯವಾದಗಳು. ಇದೇ ಒಂದು ಸಂದರ್ಭದಲ್ಲಿ ಜಿಲ್ಲೆಯ ನಿವೃತ್ತ ಶಿಕ್ಷಕಿಯರ ಗೆ ಸನ್ಮಾನ ಮಾಡಿ ಅಭಿನಂದಿಸಲಾಯಿತು.ಜೈ ಸಾವಿತ್ರಿ ಬಾಯಿ ಫುಲೆ ನಮ್ಮ ಸಂಘ ನಮ್ಮ ಹೆಮ್ಮೆ

