ಶಿಕ್ಷಕಿಯರ ಸಂಘದ ವತಿಯಿಂದ ಶಿಕ್ಷಣ ಅಧಿಕಾರಿಗಳಿಗೆ ಬೀಳ್ಕೊಡುಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಕಾರ್ಯಕ್ರಮ

ದಿನಾಂಕ: 16 ಜುಲೈ 2022 ರ ಶನಿವಾರದಂದು ಶ್ರೀ ರಾಘವೇಂದ್ರ ಸ್ವಾಮಿ ಮಠದ ಆವರಣದಲ್ಲಿ ವರ್ಗಾವಣೆಗೊಂಡ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಶ್ರೀಯುತ ಸಿದ್ಧಲಿಂಗಸ್ವಾಮಿ ಸರ್ ರವರಿಗೆ ಹಾಗೂ ಅಕ್ಷರ ದಾಸೋಹ ನಿರ್ದೇಶಕರಾದ ಶ್ರೀಯುತ ಯೋಗಾನಂದ ಸರ್ ರವರಿಗೆ

ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ (ರಿ)
ರಾಜ್ಯಘಟಕ – ಧಾರವಾಡ
ಜಿಲ್ಲಾ ಘಟಕ -ತುಮಕೂರು. ತಾಲ್ಲೂಕು ಘಟಕ – ಗುಬ್ಬಿ ವತಿಯಿಂದ

ಬೀಳ್ಕೊಡುಗೆ ಸಮಾರಂಭ ಹಾಗೂ ಸಂಘದ ಸದಸ್ಯರ SSLC, PUC ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವು ವಿಶಾಲಾಕ್ಷಿ ಮೇಡಂ ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಸದಸ್ಯರೆಲ್ಲರೂ ನಾಡಗೀತೆ ಹಾಡುವುದರ ಮೂಲಕ ನಾಡಿಗೊಂದು ನಮನ ಸಲ್ಲಿಸಿದರು. ಮಂಜುಳರವರು ಎಲ್ಲರನ್ನೂ ಸ್ವಾಗತಿಸಿದರು. ಎಲ್ಲಾ ಗಣ್ಯರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು..

ಸಂಘದ ಗುಬ್ಬಿ ತಾಲ್ಲೂಕು ಘಟಕದ ಅಧ್ಯಕ್ಷೆ ಎಸ್ ವಿ ಲಕ್ಷ್ಮಿರವರು ಪ್ರಾಸ್ತಾವಿಕ ನುಡಿಗಳನ್ನಾಡುತ್ತ ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.

ಕುಟುಂಬ ಸಮೇತರಾಗಿ ಬಂದು ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀಯುತ ಯೋಗಾನಂದ ಸರ್ ರವರು ಪ್ರಾರಂಭದಿಂದಲೂ ಸಂಘವು ಉತ್ತಮ ಕೆಲಸಗಳನ್ನು ಮಾಡುತ್ತ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿದೆ. ಮಕ್ಕಳನ್ನು ಗುರ್ತಿಸಿ ಸನ್ಮಾನಿಸಿದ್ದೂ ಕೂಡ ಶ್ಲಾಘನೀಯ ಎಂದರು. ಸಂಘವು ರಾಜ್ಯದಾದ್ಯಂತ ಪಸರಿಸಿದ್ದು ಈಗ ಮಹಾರಾಷ್ಟ್ರದಲ್ಲಿಯೂ ರಚನೆಯಾಗುತ್ತಿರುವ ಬಗ್ಗೆ ಮಾಹಿತಿ ತಿಳಿದು ಸಂತೋಷವಾಯಿತು. ಮುಂದೆ ದೇಶದಾದ್ಯಂತ ವ್ಯಾಪಿಸಿ ಉತ್ತಮ ಹೆಸರು ಪಡೆಯಲಿ ಎಂದು ಹಾರೈಸಿದರು.

ಶ್ರೀಯುತ ಸಿದ್ದಲಿಂಗಸ್ವಾಮಿ ಸರ್ ರವರು ಸಂಘದ ಕಾರ್ಯಚಟುವಟಿಕೆಗಳನ್ನು ಮೊದಲಿನಿಂದಲೂ ಗಮನಿಸುತ್ತಾ ಬಂದಿದ್ದೇನೆ.. ಸಾಮಾಜಿಕ ಮತ್ತು ಶೈಕ್ಷಣಕವಾಗಿ ಅನೇಕ ಕೆಲಸಗಳನ್ನು ಈ ಸಂಘವು ಮಾಡುತ್ತಿದೆ. ಸಾವಿತ್ರಿಬಾಯಿ ಫುಲೆ ರವರ ಚಲನಚಿತ್ರ ಬಿಡುಗಡೆ ಈ ಸಂಘದ ಮುಂದಾಳತ್ವದಲ್ಲಿ ಆಗುತ್ತಿರುವ ವಿಷಯ ಕೂಡ ಪ್ರಶಂಸನೀಯ. ಹೀಗೆಯೇ ಇನ್ನೂ ಹೆಚ್ಚು ಹೆಚ್ಚು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಸಂಘವು ಇನ್ನೂ ಉನ್ನತ ಸ್ಥಾನಕ್ಕೇರಲಿ.
ಎಲ್ಲಾ ಸಂಘಟನೆಗಳ ಗುರಿ ಒಂದೇ. ಎಲ್ಲರೂ ಸಾಮರಸ್ಯದಿಂದ ಕಾರ್ಯಪ್ರವೃತ್ತರಾಗಿ ಎಂದು ಕಿವಿಮಾತು ಹೇಳಿದರು.

ಸಂಘದ ಸದಸ್ಯರ SSLC ಮತ್ತು PUC ಮಕ್ಕಳಿಗೆ ಅವರ ಪೋಷಕರ ಸಹಿತ ಸನ್ಮಾನಿಸಲಾಯಿತು

ಲತಾಮಣಿ ಮೇಡಂ ಮತ್ತು ಅರ್ಪಣಾ ಮೇಡಂ ರವರ ಸ್ವರಚಿತ ಕವನ ವಾಚನ (ಸನ್ಮಾನಿತರನ್ನು ಕುರಿತು) ಅತ್ಯುತ್ತಮವಾಗಿತ್ತು.
ಪದ್ಮ ಮೇಡಂ ರವರು ಎಲ್ಲರಿಗೂ ವಂದನೆಗಳನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾತೃ ಸಂಘದ ಮಾಜಿ ಅಧ್ಯಕ್ಷರು ಹಾಲಿ ನಿರ್ದೇಶಕರಾದ ಶ್ರೀ ದಯಾನಂದ ಸರಸ್ವತಿ ಸರ್, ನಿರ್ದೇಶಕರುಗಳಾದ ಶ್ರೀ ಶಶಿಧರ್,
ಶ್ರೀ ಸಿದ್ದಲಿಂಗೆಗೌಡರು,ಶ್ರೀಮತಿ N T ಲಕ್ಷ್ಮಿ,ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರವೀಣ ಕುಮಾರಿ.TN ತುಮಕೂರು ತಾ.ಘಟಕದ ಲತಾ ಮೇಡಂ,ಗುಬ್ಬಿ ತಾಲೂಕು ಪ್ರಧಾನ ಕಾರ್ಯದರ್ಶಿಗಳಾದ ಅನಿತ ವಿ ಎಸ್, ಕೋಶಾಧ್ಯಕ್ಷರಾದ ಮಂಜಮ್ಮ, ಸಂಘಕ್ಕೆ ಸದಾ ಬೆನ್ನುಲುಬುಗಳಂತಿರುವ ಶ್ರೀ ಸುರೇಶಯ್ಯ M G, ಶ್ರೀ ರಂಗಸ್ವಾಮಿ, ಶ್ರೀ ರವೀಶ್, ತಾಲೂಕಿನ CRP ಗಳು, BRC ಮತ್ತು BEO ಕಛೇರಿಯವರು, ಸಂಘದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

Published by ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯಘಟಕ ಧಾರವಾಡ

ರಾಜ್ಯದ ಸರ್ಕಾರಿ,ಅನುದಾನಿತ, ಪ್ರಾಥಮಿಕ, ಪದವೀಧರ, ಹಾಗೂ ಪ್ರೌಢಶಾಲಾ ಶಿಕ್ಷಕಿಯರನ್ನೊಳಗೊಂಡ ಏಕೈಕ‌ ಸಂಘ

Leave a comment