ವೈದ್ಯರ ದಿನಾಚರಣೆ ಪ್ರಯುಕ್ತ ವೈದ್ಯರಿಗೆ ಸನ್ಮಾನ

“ವೈದ್ಯ ನಾರಾಯಣೋ ಹರಿ”

ವೈದ್ಯರ ದಿನಾಚರಣೆ ಪ್ರಯುಕ್ತ ದಿನಾಂಕ 02-07-2 022 ಶನಿವಾರದಂದು ಪ್ರಾಥಮಿಕ ಆರೋಗ್ಯ ಕೇಂದ್ರ ಘಟಕ ಮಂಡಘಟ್ಟದಲ್ಲಿ ವೈದ್ಯರಿಗೆ ಸನ್ಮಾನ ಕಾರ್ಯಕ್ರಮ ಕರ್ನಾಟಕ ಸಾವಿತ್ರಬಾಯಿ ಫುಲೆ ಶಿಕ್ಷಕಿಯರ ಸಂಘ ಶಿವಮೊಗ್ಗ ಇವರಿಂದ ಸಮಾರಂಭ ನಡೆಸಲಾಯಿತು.

ಆಸ್ಪತ್ರೆಯ ವೈದ್ಯರಾದ ಶ್ರೀಯುತ ಸುರೇಶ್,l ಅಪ್ಪಾಜಿಗೌಡ ,ಹಾಗೂ ಸಿಬ್ಬಂದಿ ವರ್ಗದವರಾದ ಶ್ರೀಮತಿ ಪ್ರೇಮ, ಸುಮಾ, ರಂಗನಾಥ್, ಮುಂತಾದವರು *ಪಾಲ್ಗೊಂಡಿದ್ದರು. ಇವರಿಗೆ ಕರ್ನಾಟಕ *ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀಮತಿ ರಾಧಾ ಪ್ರಭುಗೌಡ ಅವರು ವೈದ್ಯರ ದಿನಾಚರಣೆ ಪ್ರಯುಕ್ತ ಪ್ರತಿಯೊಬ್ಬರಿಗೂ ಗೌರವಿಸಿ ಸನ್ಮಾನಿಸಲಾಯಿತು.*
ಶ್ರೀಯುತ ಡಾಕ್ಟರ್ ಸುರೇಶ್ ಅಪ್ಪಾಜಿಗೌಡರವರು ಶಾಲೆಯ ಮಕ್ಕಳಿಗೆ ಯಾವ ಸಮಯದಲ್ಲೂ ಕೂಡ ಹೋದರು ಮಕ್ಕಳಿಗೆ ಪ್ರೀತಿಯಿಂದ ಕಾಳಜಿಯಿಂದ ಜವಾಬ್ದಾರಿಯುತವಾಗಿ ಚಿಕಿತ್ಸೆ ನೀಡಿ ಗುಣಪಡಿಸಿ ಕಳಿಸುತ್ತಾರೆ . ಇದು ನಮ್ಮೆಲ್ಲರ ಹೆಮ್ಮೆಯ ವಿಚಾರ ಅದೇ ರೀತಿ ಪ್ರೇಮ ರವರು ಕೂಡ ನಮ್ಮ ಶಾಲೆ ಎಲ್ಲಾ ಮಕ್ಕಳನ್ನು ಕೂಡ ಚಿಕಿತ್ಸೆ ಸಮಯದಲ್ಲಿ ಕಾಳಜಿ ರೂಪದಿಂದ ನೋಡಿಕೊಳ್ಳುತ್ತಾರೆ ಇಂತಹ ಡಾಕ್ಟರ್ ಹಾಗೂ ಸಿಬ್ಬಂದಿಯಿಂದ ನಮಗೆ ಮತ್ತು ನಮ್ಮ ಗ್ರಾಮಕ್ಕೆ ಹೆಮ್ಮೆಯ ವಿಚಾರ ಹೃತ್ಪೂರ್ವಕವಾಗಿ ಧನ್ಯವಾದಗಳನ್ನು ತಿಳಿಸುತ್ತೇವೆ…
ಈ ಕಾರ್ಯಕ್ರಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಉಪಾಧ್ಯಕ್ಷರಾದ ಶ್ರೀಮತಿ ವನಜಾಕ್ಷಿ ಶಶಿಕುಮಾರ್ ಹಾಗೂ ಶಿಕ್ಷಕಿಯರಾದ ಶ್ರೀಮತಿ ದಮಯಂತಿ ಮಂಜುಳಾ ದೇವಿಕ ಇನ್ನು ಮುಂತಾದವರು ಉಪಸ್ಥಿತರಿದ್ದರು

Published by ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯಘಟಕ ಧಾರವಾಡ

ರಾಜ್ಯದ ಸರ್ಕಾರಿ,ಅನುದಾನಿತ, ಪ್ರಾಥಮಿಕ, ಪದವೀಧರ, ಹಾಗೂ ಪ್ರೌಢಶಾಲಾ ಶಿಕ್ಷಕಿಯರನ್ನೊಳಗೊಂಡ ಏಕೈಕ‌ ಸಂಘ

Leave a comment