
ವೈದ್ಯ ನಾರಾಯಣೋ ಹರಿ,ವೈದ್ಯರ ದಿನಾಚರಣೆಯ ಪ್ರಯುಕ್ತ ದಿನಾಂಕ 02-07-22 ಶನಿವಾರದಂದು ವೈದ್ಯರಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಮಾಸಿಕ ಸಭೆಯನ್ನು ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘ ಜಿಲ್ಲಾಘಟಕ ರಾಮನಗರ ವತಿಯಿಂದ ನಡೆಸಲಾಯಿತು.ಈ ಕಾರ್ಯಕ್ರಮದಲ್ಲಿ ವೈದ್ಯರಾದ ಡಾ/ಜಮೀಲರವರು “ಆರೋಗ್ಯ” ದ ಬಗ್ಗೆ ಅತ್ಯುತ್ತಮ ವಾದ 4 ಟಿಪ್ಸ್ ತಿಳಿಸಿದರು.ಹಾಗೂ ದಿನಚರಿಯ ಆಹಾರ ಕ್ರಮಹೇಗಿರಬೇಕೆಂಬ ಬಗ್ಗೆಅತ್ಯಂತ ಸವಿಸ್ತಾರವಾಗಿ ತಿಳಿಸಿದರು.ವೈದ್ಯ ದಂಪತಿಗಳಾದ ಡಾ| ಮುಜಾಹಿದುಲ್ಲಾ ಶರೀಫ್ ಹಾಗೂ ಡಾ /ಸಯ್ಯಿದಾ ಬಾನು “ಆರೋಗ್ಯವೇ ಭಾಗ್ಯ” ಇಂದಿನ ಒತ್ತಡಸಹಿತ ಜೀವನದಲ್ಲಿ ನಾವು ಹೇಗೆ ಒತ್ತಡ ಮುಕ್ತರಾಗಿ ಆರೋಗ್ಯ ಕಾಪಾಡಿಕೊಳ್ಳಬಹುದೆಂಬುದರ ಬಗ್ಗೆ ಬಹಳ ಸರಳವಾಗಿ ತಿಳಿಸಿದರು.ಈ ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷರಾದ ಡಾ.ರತ್ನಮ್ಮರೊಂದಿಗೆ ಜಿಲ್ಲಾ ಹಾಗೂ ತಾಲ್ಲೂಕು ಘಟಕದ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು , ಇದೇ ಸಂದರ್ಭದಲ್ಲಿ ಜುಲೈ31 ರಂದು ರಾಜ್ಯದಾದ್ಯಂತ ಬಿಡುಗಡೆಗೆ ಸಿದ್ದವಾಗಿರುವ ಮಾತೆ ಸಾವಿತ್ರಿ ಫುಲೆಯ ಚಿತ್ರದ ಟಿಕೆಟ್ ಗಳನ್ನು ಅಧ್ಯಕ್ಷರು, ಕಾರ್ಯದರ್ಶಿ ಗಳಿಗೆ ವಿತರಿಸಲಾಯಿತು ಈ ಸಂದರ್ಭದಲ್ಲಿ ಹಾಜರಿದ್ದು ಕಾರ್ಯಕ್ರಮದ ಯಶಸ್ವಿಗೆ ಕಾರಣರಾದ ಪ್ರತಿಯೂಬ್ಬ ಪದಾದಿಕಾರಿಗಳಿಗೆ ಹಾಗೂ ವೈದ್ಯರಿಗೆ ಹೃದಯ ಸ್ಪರ್ಶಿ ಅಭಿನಂದನೆಗಳನ್ನು ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧ್ಯಕ್ಷರು ತಿಳಿಸಿದ್ದಾರೆ. ನಮ್ಮ ಸಂಘ ನಮ್ಮ ಹೆಮ್ಮೆ
