ಜುಲೈ-31ರಂದು ಸಾವಿತ್ರಿಬಾಯಿ ಫುಲೆ ಚಲನಚಿತ್ರ ಪ್ರದರ್ಶನ-ವಿದ್ಯಾರ್ಥಿಗಳಿಗೆ,ಶಿಕ್ಷಕ ಶಿಕ್ಷಕಿಯರಿಗೆ ಮಾನ್ಯ ಸಚಿವರಿಂದ ಉಚಿತ ಟಿಕೆಟ್ ವ್ಯವಸ್ಥೆ.

ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ (ರಿ). ರಾಜ್ಯ ಘಟಕ-ಧಾರವಾಡ ಜಿಲ್ಲಾಘಟಕ : ವಿಜಯನಗರ.

ಅಕ್ಷರದವ್ವ ಮಾತೆ ಸಾವಿತ್ರಿಬಾಯಿ ಫುಲೆಯವರ ಜೀವನಾಧಾರಿತ ಚಲನಚಿತ್ರ ‘ರಾಷ್ಟ್ರ ಪ್ರಶಸ್ತಿ ವಿಜೇತೆ ಜನಪ್ರಿಯ ನಟಿ ತಾರಾ ಅವರು ಮಾತೇ ಸಾವಿತ್ರಿಬಾಯಿ ಫುಲೆ ಅವರ ಪಾತ್ರದಲ್ಲಿ ನಟಿಸಿರುವ. ಜನಪ್ರಿಯ ನಟ ಸುಚೇಂದ್ರ ಪ್ರಸಾದ ಅವರು ಜ್ಯೋತಿಬಾ ಫುಲೆ ಪಾತ್ರದಲ್ಲಿ ನಟಿಸಿರುವ, ಜನಪ್ರಿಯ ನಿರ್ದೇಶಕರಾದ ಶ್ರೀ ವಿಶಾಲರಾಜ್ ಅವರು ನಿರ್ದೇಶಿಸಿದ ಹಾಗೂ ಉತ್ತರ ಕರ್ನಾಟಕದ ಯಾದವಾಡದ ಶ್ರೀ ಬಸವರಾಜ ಭೂತಾಳ್ಳಿ ಅವರು ಪ್ರೊಡ್ಯೂಸರ ಆಗಿರುವ ಚಲನಚಿತ್ರ ಮಾತೆಯ ಹೆಸರಿನ ಸಾವಿತ್ರಿಬಾಯಿ ಫುಲೆ’ ಯು ಜುಲೈ 31ರಂದು ರಾಜ್ಯಾದ್ಯಂತ ಏಕಕಾಲದಲ್ಲಿ ಪ್ರದರ್ಶನಗೊಳ್ಳುತ್ತಿರುವುದು ನಿಜಕ್ಕೂ ಸಂತಸದ ವಿಷಯ. ಅದರಲ್ಲೂ ನಮ್ಮ ಸಂಘಟನೆಯ ಮೂಲಕ ತರೆಕಾಣುತ್ತಿರುವುದು ಇನ್ನಷ್ಟು ಹೆಮ್ಮೆಯ ಸಂಗತಿ.ವಿಜಯನಗರ ಜಿಲ್ಲೆಯ ಹೆಮ್ಮಯ ಜನನಾಯಕರು, ಜನಪ್ರಿಯ ಶಾಸಕರು. ಸಚಿವರು ಆದ ಸನ್ಮಾನ್ಯ ಶ್ರೀ ಆನಂದಸಿಂಗ್ ಸಾರ್ ಅವರ ಸುಪುತ್ರರಾದ ಶ್ರೀ ಸಿದ್ದಾಥ೯ಸಿಂಗ್ ಸಾರ್ ಅವರು ತಮ್ಮ ಕ್ಷೇತ್ರದಲ್ಲಿ 10ನೇ ತರಗತಿ ಓದುತ್ತಿರುವ ವಿದ್ಯಾಥಿ೯ / ವಿದ್ಯಾಥಿ೯ನಿಯರಿಗೆ ಮತ್ತು ಎಲ್ಲಾ ಶಿಕ್ಷಕ / ಶಿಕ್ಷಕಿಯರಿಗೆ ಸಾವಿತ್ರಿಬಾಯಿ ಫುಲೆ ಅವರ ಜೀವನಾಧಾರಿತ ಸಿನೆಮಾ ತೋರಿಸಲು ಅದರ ಖರ್ಚುವೆಚ್ಚ ಭರಿಸಲು ಒಪ್ಪಿಕೊಂಡಿದ್ದಾರೆ . ಅವರಿಗೆ ನಮ್ಮ ಸಂಘದ ಪರವಾಗಿ ಹೃದಯಪೂವ೯ ಧನ್ಯವಾದಗಳು.

ಡಾ. ಲತಾ. ಎಸ್. ಮುಳ್ಳೂರ
ಸಂಸ್ಥಾಪಕ ರಾಜ್ಯಾಧ್ಯಕ್ಷರು

ಶ್ರೀಮತಿ ಉಮಾದೇವಿ.
ಜಿಲ್ಲಾ ಅಧ್ಯಕ್ಷರು
ವಿಜಯನಗರ ಜಿಲ್ಲೆ.

Published by ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯಘಟಕ ಧಾರವಾಡ

ರಾಜ್ಯದ ಸರ್ಕಾರಿ,ಅನುದಾನಿತ, ಪ್ರಾಥಮಿಕ, ಪದವೀಧರ, ಹಾಗೂ ಪ್ರೌಢಶಾಲಾ ಶಿಕ್ಷಕಿಯರನ್ನೊಳಗೊಂಡ ಏಕೈಕ‌ ಸಂಘ

Leave a comment