ನೂತನ ಅಧಿಕಾರಿಗಳಿಗೆ ಸ್ವಾಗತಿಸಿ ಅಭಿನಂದಿಸಿದ ಫುಲೆ ಶಿಕ್ಷಕಿಯರು

ಗುಬ್ಬಿ-ಮೇ 21, 2022ರ ಶನಿವಾರದಂದು ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ರಾಜ್ಯಘಟಕ-ಧಾರವಾಡ,ಜಿಲ್ಲಾಘಟಕ- ತುಮಕೂರು, ಗುಬ್ಬಿ ತಾಲೂಕು ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ತಾಲೂಕಿಗೆ ನೂತನವಾಗಿ ಆಗಮಿಸಿದ ಬಿಆರ್ಸಿಯವರಾದ ಶ್ರೀಯುತ ಮಧುಸೂದನ್ ಸರ್ ಹಾಗೂ ಅಕ್ಷರ ದಾಸೋಹದ ನಿರ್ದೇಶಕರಾದ ಶ್ರೀಯುತ ಜಗದೀಶ್ ಸರ್ ರವರಿಗೆ ಸ್ವಾಗತವನ್ನು ಕೋರಿ ಅಭಿನಂದಿಸಿದರು

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಶ್ರೀಯುತ ಮಧುಸೂದನ್ ಸರ್ ರವರು ಸಂಘದ ಬಗ್ಗೆ ನನಗೆ ತಿಳಿದಿದೆ. ಸಂಘವು ರಚನೆಯಾಗಿ ಮೂರು ವರ್ಷಗಳಲ್ಲೇ ರಾಜ್ಯದಾದ್ಯಂತ ಉತ್ತಮ ಹೆಸರು ಗಳಿಸಿದೆ.. ಹೀಗೆಯೇ ಉತ್ತಮ ಕೆಲಸಗಳನ್ನು ಮಾಡುತ್ತಾ ಹೋದರೆ ಮಾತೃ ಸಂಘವನ್ನೆ ಹಿಂದಿಕ್ಕಿ ಸಾವಿತ್ರಿ ಬಾಯಿ ಫುಲೆ ಸಂಘವು ಮುನ್ನುಗ್ಗುವುದರಲ್ಲಿ ಅನುಮಾನವಿಲ್ಲ. ನಿಮ್ಮ ಸಂಘಕ್ಕೆ ನನ್ನ ಸಹಕಾರ ಯಾವಾಗಲೂ ಇರುತ್ತದೆ ಎಂದು ಹೇಳಿದರು..

ಶ್ರೀಯುತ ಜಗದೀಶ್ ಸರ್ ರವರು ಮಾತನಾಡಿ ನನಗೆ ಅಭಿನಂದನೆ ಸಲ್ಲಿಸಿದ ಸಾವಿತ್ರಿ ಬಾಯಿ ಫುಲೆ ಸಂಘಕ್ಕೆ ಧನ್ಯವಾದಗಳು ಸಂಘದ ಎಲ್ಲಾ ಕೆಲಸಗಳಿಗೂ ನನ್ನ ಸಹಕಾರ ಇರುತ್ತದೆ ನಿಮ್ಮೆಲ್ಲ ಕಾರ್ಯಕ್ರಮಗಳಿಗೂ ನಾನು ಹಾಜರಾಗುತ್ತೇನೆ ನಿಮ್ಮ ಸಂಘವು ರಾಜ್ಯಾದ್ಯಂತ ಉತ್ತಮ ಕೆಲಸಗಳನ್ನು ಮಾಡುತ್ತಿದೆ ನೀವು ಕೂಡ ನಮ್ಮ ಇಲಾಖಾ ಕೆಲಸಗಳಿಗೆ ಕೈ ಜೋಡಿಸಿ.. ಸಂಘವು ಇನ್ನೂ ಹೆಚ್ಚು ಉತ್ತಮ ಕೆಲಸಗಳನ್ನು ಮಾಡುತ್ತಾ ಮುನ್ನಡೆಯಲಿ ಎಂದು ಹರಸಿದರು..

ಈ ಸಂದರ್ಭದಲ್ಲಿ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಗುಬ್ಬಿ ತಾಲೂಕು ಘಟಕದ ಅಧ್ಯಕ್ಷರಾದ ಲಕ್ಷ್ಮಿ ಎಸ್ ವಿ ರವರು, ಕಾರ್ಯದರ್ಶಿಯವರಾದ ಅನಿತ ವಿ ಎಸ್ ರವರು, ಕೋಶಾಧ್ಯಕ್ಷರಾದ ಮಂಜಮ್ಮ ಬಿ ಎಸ್ ರವರು ಪದಾಧಿಕಾರಿಗಳಾದ ಶ್ರಿಮತಿ ಲೀಲಾವತಿ ಶ್ರಿಮತಿ ಸುಗುಣ ಶ್ರಿಮತಿ ತಿಮ್ಮಮ್ಮ ಶ್ರಿಮತಿ ಜಯಮ್ಮ ಶ್ರೀಮತಿ ಲತಾಮಣಿ ಕೆ ಎಸ್ ಶ್ರೀಮತಿ ಅರ್ಪಣಾ ಶ್ರೀಮತಿ ಪದ್ಮಾವತಿ ಶ್ರೀಮತಿ ವಿಶಾಲಾಕ್ಷಿ, ಮಾತೃ ಸಂಘದ ನಿರ್ದೇಶಕರಾದ ಶ್ರೀಯುತ ಕಾಂತರಾಜು ಸರ್ ರವರು ಹಾಗೂ ಸದಾ ನಮಗೆ ಬೆಂಬಲವಾಗಿರುವ ಶ್ರೀಯುತ ಸುರೇಶ್ ಸರ್ ಅವರು ಹಾಜರಿದ್ದರು,ಭಾಗವಹಿಸಿ ಸಹಕರಿಸಿದ ಎಲ್ಲರಿಗೂ ಶ್ರೀಮತಿ ಅನಿತ ತಾಲ್ಲೂಕು ಪ್ರಧಾನ ಕಾರ್ಯದರ್ಶಿಗಳು ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ಶ್ರೀಮತಿ ಲಕ್ಷ್ಮೀ,ಎಸ್.ವಿ. ಅಧ್ಯಕ್ಷರು,ಗುಬ್ಬಿ ತಾಲ್ಲೂಕು
ಶ್ರೀಮತಿ ಅನಿತಾ,ವಿ.ಎಸ್.ಪ್ರಧಾನ ಕಾರ್ಯದರ್ಶಿ,ಗುಬ್ಬಿ.ತಾ.

Published by ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯಘಟಕ ಧಾರವಾಡ

ರಾಜ್ಯದ ಸರ್ಕಾರಿ,ಅನುದಾನಿತ, ಪ್ರಾಥಮಿಕ, ಪದವೀಧರ, ಹಾಗೂ ಪ್ರೌಢಶಾಲಾ ಶಿಕ್ಷಕಿಯರನ್ನೊಳಗೊಂಡ ಏಕೈಕ‌ ಸಂಘ

Leave a comment