ಮೊದಲಿಗೆ ಶಿಕ್ಷಕಿಯಾಗಿದ್ದ ಪ್ರತಿಭ. ಆರ್ ಇಂದು ತಾಲ್ಲೂಕು ದಂಡಾಧಿಕಾರಿಗಳಾಗಿ ನೇಮಕ-ಅಭಿನಂದಿಸಿ ಬೀಳ್ಕೊಟ್ಟ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರು

ತುಮಕೂರು ಮೇ04-ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ರಾಜ್ಯಘಟಕ-ಧಾರವಾಡ, ಜಿಲ್ಲಾ- ಘಟಕ ತುಮಕೂರು ವತಿಯಿಂದ ಉಪನಿರ್ದೇಶಕರ ಕಛೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ ತುಮಕೂರು(ದ) ಇಲ್ಲಿ ವಿಜ್ಞಾನ ವಿಷಯದ ಪರಿವೀಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಶ್ರೀಮತಿ ಪ್ರತಿಭಾ ಆರ್.ರವರು ರವರು ತಹಸೀಲ್ದಾರರಾಗಿ ನೇಮಕಗೊಂಡಿದ್ದರಿಂದ ಅವರಿಗೆ ಅಭಿನಂದಿಸಿ ಗೌರವಿಸಲಾಯಿತು. ಶ್ರೀಮತಿ ಪ್ರತಿಭಾ ರವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಪ್ರಾರಂಭದಲ್ಲಿ ಸರ್ಕಾರಿ ಸೇವೆಗೆ ಸೇರಿ ನಂತರದಲ್ಲಿ ಪ್ರೌಢಶಾಲಾ ಶಿಕ್ಷಕಿಯಾಗಿ ಬಡ್ತಿಯಾಗಿ, ಸರ್ಕಾರಿ ಶಿಕ್ಷಕರ ತರಬೇತಿ ಕಾಲೇಜಿನ ಉಪನ್ಯಾಸಕರಾಗಿ ಪ್ರಸ್ತುತ ತುಮಕೂರಿನ ಉಪ ನಿರ್ದೇಶಕರ ಕಛೇರಿಯಲ್ಲಿ ವಿಜ್ಞಾನ ವಿಷಯದ ಪರಿವೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕೆಪಿಎಸ್ ಸಿ ನೇರ ನೇಮಕದಲ್ಲಿ ಇಂದು ತಹಸೀಲ್ದಾರರಾಗಿ ನೇಮಕಗೊಂಡು, ತುಮಕೂರು ಜಿಲ್ಲೆಯ ಮಹಿಳಾ ಸಾಧಕಿಯರಲ್ಲಿ ಒಬ್ಬರಾಗಿದ್ದಾರೆ.ಇದು ಜಿಲ್ಲೆಗೆ ಹೆಮ್ಮೆ ತಂದಿರುವ ವಿಷಯವಾಗಿದೆ ಎಂದು ಜಿಲ್ಲಾಧ್ಯಕ್ಷರಾದ ಶ್ರೀಮತಿ ಅನಸೂಯಾದೇವಿ ಯವರು ಅಭಿಪ್ರಾಯಪಟ್ಟಿದ್ದಾರೆ, ಕಾರ್ಯದರ್ಶಿಯಾದ ಪ್ರವೀಣ ಕುಮಾರಿಯವರು ಇತರ ಪದಾಧಿಕಾರಿಗಳಾದ ಯಶೋದಮ್ಮನವರು, ಹೇಮಾವತಿ ರವರು, ಲತಾ ರವರು, ಸುಶೀಲಮ್ಮನವರು, ಚಂದ್ರಮ್ಮ ನವರು, ಗೀತಾರವರು, ಲೋಕಾಂಬ ರವರು ಎಲ್ಲರು ಭಾಗವಹಿಸಿ ಅವರಿಗೆ ಗೌರವ ಸಮರ್ಪಣೆ ಸಲ್ಲಿಸುವ ಮೂಲಕ ಬೀಳ್ಕೊಟ್ಟಿದ್ದಾರೆ. ಕಾರ್ಯಕ್ರಮದಲ್ಲಿ ಜಿಲ್ಲಾ ಎಪಿಸಿ ಅಧಿಕಾರಿಗಳಾದ ಶ್ರೀಮತಿ ಲಾವಣ್ಯ ಮೇಡಂ ರವರು ಹಾಗೂ ಶ್ರೀಮತಿ ತಾರಾಮಣಿ ಮೇಡಂ ರವರು ಸಹಾ ಬಾಗವಹಿಸಿ ಅವರನ್ನು ಪ್ರೀತಿಯಿಂದ ಅಭಿನಂದಿಸಿದ್ದಾರೆ.

ಕಾರ್ಯಕ್ರಮ ಕುರಿತು ಮಾತಾನಾಡಿದ ಶ್ರೀಮತಿ ಪ್ರತಿಭ ಆರ್ ರವರು ತಾವು ಬೆಳೆದು ಬಂದ ಹಾದಿಯನ್ನ ಹಾಗೂ ತನಗಾದ ಸಂತೋಷವನ್ನ ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ.ನನ್ನ ಸಾದನೆಗೆ ತಂದೆ ತಾಯಿಗಳ ಆಶೀರ್ವಾದ ಹಾಗೂ ಕುಟುಂಬದ  ಸಂಪೂರ್ಣ ಸಹಕಾರ ಸಿಕ್ಕಿದ್ದು ಕಾರಣವಾಗಿದೆ.ಹಾಗೆಯೇ ಹಿತೈಷಿಗಳ ಪ್ರೀತಿಯು ಸಹ ಇದರಲ್ಲಿದೆ ಆದ್ದರಿಂದ ತಹಶೀಲ್ದಾರಾಗುವ ಕನಸು ಇಂದು ನನಸಾಗಿದೆ ಎಂದು  ಸಂತಸ ವ್ಯಕ್ತಪಡಿಸಿದ್ದಾರೆ.ವಿದ್ಯಾಬ್ಯಾಸದಲ್ಲಿ ಉತ್ತಮ ಸಾಧನೆ ಮಾಡಿರುವ ಅವರು ಪದವಿಯಲ್ಲಿ ಪ್ರಥಮ ರ್ಯಾಂಕ್ ಪಡೆದವರಾಗಿದ್ದು,ಬಿ.ಎಡ್.ಎಂ.ಎಡ್.ಎಂ.ಫಿಲ್ ಸಹಾ ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.ಕೆ.ಇ.ಎಸ್. ಮಾಡಿದ್ದ ಅವರು ಇಂದು ಕೆ.ಎ.ಎಸ್.ಕೂಡ ಮುಗಿಸಿ ತಹಶೀಲ್ದಾರರು/ ತಾಲ್ಲೂಕು ದಂಡಾಧಿಕಾರಿಯಾಗಿ ನೇಮಕಗೊಂಡು ಶಿಕ್ಷಕಿಯರಿಗೆ ಮಾದರಿಯಾಗಿದ್ದಾರೆ. ತುಮಕೂರು ಜಿಲ್ಲೆಗಷ್ಟೆ ಅಲ್ಲದೇ ಇಡೀ ರಾಜ್ಯಕ್ಕೆ ಒಂದು ಹೆಮ್ಮೆಯ ವಿಚಾರವಾಗಿದೆ. ರಾಜ್ಯದ ಸಮಸ್ತ ಮಹಿಳಾ ಶಿಕ್ಷಕಿಯರಿಗೆ ಅತೀವ ಸಂತಸ ತಂದಿದೆ.ಅವರ ಮುಂದಿನ ಆಡಳಿತದಲ್ಲಿ ಉತ್ತಮ ಸೇವೆ ಮಾಡಲಿ,ಅತ್ಯುತ್ತಮ ಅಧಿಕಾರಿಯಾಗಿ ಅವರ ಹೆಸರು ಮತ್ತಷ್ಟು ಎತ್ತರಕ್ಕೆ ಏರಲಿ ಎಂದು  ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಲತಾ.ಎಸ್.ಮುಳ್ಳೂರ ರವರು ಅಭಿನಂದಿಸಿ ಆಶಿಸಿದ್ದಾರೆ.

Published by ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯಘಟಕ ಧಾರವಾಡ

ರಾಜ್ಯದ ಸರ್ಕಾರಿ,ಅನುದಾನಿತ, ಪ್ರಾಥಮಿಕ, ಪದವೀಧರ, ಹಾಗೂ ಪ್ರೌಢಶಾಲಾ ಶಿಕ್ಷಕಿಯರನ್ನೊಳಗೊಂಡ ಏಕೈಕ‌ ಸಂಘ

Leave a comment