ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯಘಟಕ-ಧಾರವಾಡ ವತಿಯಿಂದ OTS ಗೆ ಬೆಂಬಲ

ಧಾರವಾಡ ಏ.20.ಸೇವಾವದಿಯಲ್ಲಿ ಒಮ್ಮೆ ಬಯಸಿದ ಜಿಲ್ಲೆಗೆ ವರ್ಗಾವಣೆ
OTS Transfer (One time settlement transfer)
ಕೋರಿ ಬೆಂಗಳೂರಲ್ಲಿ ನೂರಾರು ಶಿಕ್ಷಕ ಶಿಕ್ಷಕಿಯರು ಸೇರಿ ಹೋರಾಟ ನಡೆಸುತ್ತಿದ್ದಾರೆ.ಈ ಹೋರಾಟಕ್ಕೆ ನಮ್ಮ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘವು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ ಎಂದು ಡಾ. ಲತಾ. ಎಸ್.ಮುಳ್ಳೂರ ಸಂಸ್ಥಾಪಕ ರಾಜ್ಯಾಧ್ಯಕ್ಷರು ತಿಳಿಸಿದ್ದಾರೆ.
ಹತ್ತು ಹದಿನೈದು ವರ್ಷಗಳ ಕಾಲ ನೂರಾರು ಕಿ.ಮೀ ದೂರದ ಜಿಲ್ಲೆಗಳಲ್ಲಿ ಸಂಸಾರ ಇದ್ದು ಇಲ್ಲದಂತೆ ಎಲ್ಲದರಿಂದ ದೂರವಾಗಿ ಒಬ್ಬಂಟಿಯಾಗಿ ಮನೆ ಮಾಡಿಕೊಂಡು ಶಿಕ್ಷಕ ವೃತ್ತಿ ಮಾಡುತ್ತಿರುವ ಸಹೋದರ ಸಹೋದರಿಯರು ಮಾನಸಿಕ ನೆಮ್ಮದಿಯಿಲ್ಲದೇ ಖಿನ್ನತೆಗೊಳಗಾಗಿದ್ದಾರೆ.
ಕುಟುಂಬಗಳ ನಡುವಿನ ಬಾಂದವ್ಯದಲ್ಲಿ ಬಿರುಕು ಉಂಟಾಗಿದೆ,ಅವರ ಸಂಸಾರದ ಜೀವನಗಳು ಅಸ್ತವ್ಯಸ್ಥವಾಗಿದೆ,ಪತಿ ಒಂದು ಕಡೆ, ಪತ್ನಿ ಒಂದು ಕಡೆ, ಮಕ್ಕಳು ಒಂದುಕಡೆ ಹೀಗೇ ಎಲ್ಲರ ನಡುವಿನ ಸಂಬಂಧಗಳೇ ಕಡಿದುಹೋಗಿದೆ,ಇದರಿಂದಾಗಿ ನೆಮ್ಮದಿಯಿಲ್ಲದೇ ಕೆಲಸ, ಮಾಡುತ್ತಿರುವ ಅನೇಕ ಶಿಕ್ಷಕ ಶಿಕ್ಷಕಿಯರಿದ್ದಾರೆ,ಇಳಿವಯಸ್ಸಿನ ತಂದೆತಾಯಿಗಳನ್ನು ಸಾಕಲು ಸಹಾ ಸಾದ್ಯವಾಗದ ಪರಿಸ್ಥಿತಿಗಳು ಸಹಾ ಶಿಕ್ಷಕರಿಗೆ ಇದೆ ಇದರಿಂದ ಪತಿಪತ್ನಿಗಳ ನಡುವೇ ವ್ಯಾಜ್ಯಗಳು, ವಿಚ್ಚೇದನ ಪ್ರಕರಣಗಳು ಹೆಚ್ಚಾಗಿದೆ, ಮಾನಸಿಕ ಖಿನ್ನತೆಗೊಳಗಾಗಿದ್ದಾರೆ.


ಮಹಿಳಾ ಶಿಕ್ಷಕಿಯರು ಒಬ್ಬಂಟಿಯಾಗಿ ಮನೆ ಮಾಡಿಕೊಂಡು ಭಯದಿಂದ ಬದುಕುವ ಸ್ಥಿತಿ ಇದೆ ,ಭಯದ ವಾತಾವರಣದಲ್ಲಿಯೇ ಶಾಲೆಗೆ ಹೋಗಿ ಕೆಲಸ ಮಾಡುತ್ತಿರುವ ಹಲವಾರು ಶಿಕ್ಷಕಿಯರಿದ್ದಾರೆ.ಇದರಿಂದ ಶಾಲೆಯಲ್ಲಿ ಶಿಕ್ಷಕ ಶಿಕ್ಷಕಿಯರು ನೆಮ್ಮದಿಯಾಗಿ ಪಾಠ ಕಲಿಸಲು ಸಾದ್ಯವಾಗುತಿಲ್ಲ, ಈಗಾಗಲೇ ಈ ಸಂಬಂಧ ಹಲವಾರು ಬಾರಿ ಮನವಿಯನ್ನು ಸಲ್ಲಿಸಿ ಸರ್ಕಾರದ ಗಮನ ಸೆಳೆಯಲಾಗಿದೆ.
ಇದನ್ನೆಲ್ಲ ಮನಗಂಡು ಘನ ಸರ್ಕಾರವು ಕೂಡಲೇ ಅಂತಹ ಶಿಕ್ಷಕ ಶಿಕ್ಷಕಿಯರನ್ನು ಸೇವೆಯಲ್ಲಿ ಒಂದುಬಾರಿ ಅವರು ಬಯಸಿದ ಜಿಲ್ಲೆಗೆ ಈ ರಜೆ ಅವಧಿಯಲ್ಲಿಯೇ ವರ್ಗಾವಣೆ ಮಾಡಿ ಬರುವ ಶೈಕ್ಷಣಿಕ ವರ್ಷದಿಂದಾದರೂ ನೆಮ್ಮದಿಯ ಜೀವನದೊಂದಿಗೆ ಶಾಲಾ ಕರ್ತವ್ಯ ನಿರ್ವಹಿಸಲು ಅನುಕೂಲ ಮಾಡಿಕೊಡಬೇಕೆಂದು ಈ ಮೂಲಕ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘವು ಒತ್ತಾಯಿಸಿದೆ

Published by ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯಘಟಕ ಧಾರವಾಡ

ರಾಜ್ಯದ ಸರ್ಕಾರಿ,ಅನುದಾನಿತ, ಪ್ರಾಥಮಿಕ, ಪದವೀಧರ, ಹಾಗೂ ಪ್ರೌಢಶಾಲಾ ಶಿಕ್ಷಕಿಯರನ್ನೊಳಗೊಂಡ ಏಕೈಕ‌ ಸಂಘ

Leave a comment