ಔದಾರ್ಯ ಮೆರೆದು ಮಾದರಿಯಾದ ಸಾವಿತ್ರಿಬಾಯಿ ಫುಲೆ ಸಂಘದ ಪದಾಧಿಕಾರಿ -ಅಭಿನಂದನೆ ಕೋರಿದ ಡಾ.ಲತಾ.ಎಸ್.ಮುಳ್ಳೂರ

ವಿಜಯಪುರ ಜ. 26. ಗಣರಾಜ್ಯೋತ್ಸವ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮ ಮುಗಿಸಿ ಶಿಕ್ಷಕಿಯರು ರಿಕ್ಷಾದಲ್ಲಿ ಮನೆಗೆ ಮರಳುತ್ತಿರುವಾಗ ದಾರಿ ಮದ್ಯದಲ್ಲಿ ರಿಕ್ಷಾ ಹಾಗೂ ಮೋಟಾರ್ಸೈಕಲ್ ನಡುವೆ ಅಪಘಾತ ಉಂಟಾಗಿದೆ.ಈ ಅವಘಡದಿಂದಾಗಿ 3 ಜನ ಶಿಕ್ಷಕಿಯರು ಗಂಭೀರವಾಗಿ ಘಾಯಗೊಂಡು ನರಳುವುದನ್ನು ನೋಡಿದ ಬಹಳಷ್ಟು ಜನರು ಫೋಟೋ ವಿಡಿಯೋ ತೆಗಿಯುವುದರಲ್ಲಿ ತೊಡಗಿದ್ದರೇ ಹೊರತು ಗಾಯಾಳುಗಳ ನೆರವಿಗೆ ಗಮನ ಕೊಡದೇ ಹೋದರು.


ಆದರೆ ಅದೇ ಸಮಯದಲ್ಲಿ ಬಂದ ವಿಜಯಪುರ ಜಿಲ್ಲೆಯ ಕರ್ನಾಟಕ ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘ (ರಿ),ತಿಕೋಟಾ ತಾಲೂಕ ಘಟಕದ ಪ್ರಧಾನ ಕಾರ್ಯದರ್ಶಿಯಾದ ಶ್ರೀಮತಿ ಭಾರತಮಾತಾ ಗುಜರೆ ಇವರು ತಕ್ಷಣದಲ್ಲಿ ಗಾಯಗೊಂಡಿದ್ದ ಆ ಮೂರು ಜನ ಶಿಕ್ಷಕಿಯರನ್ನು ಕಾರಿನೊಳಗೆ ಕರೆದುಕೊಂಡು ವಿಜಯಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಉಪಚಾರ ಮಾಡಿಸಿ ತಮ್ಮ ಸೇವಾ ಔದಾರ್ಯ ಮೆರೆದಿದ್ದಾರೆ. ಹಾಗೂ ಸಂಘದ ಆದರ್ಶಗಳಿಗೆ ಮಾದರಿಯಾಗಿನಡೆದುಕೊಂಡಿ ದ್ದಾರೆ. ತದ ನಂತರದಲ್ಲಿ ಇಲಾಖಾಧಿಕಾರಿಗಳು, ಸಂಘಟನೆಗಳ ನಾಯಕರುಗಳು ಸಹಾ ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಿಸಿದ್ದಾರೆ ಎನ್ನಲಾಗಿದೆ. ಈ ಸುದ್ದಿ ತಿಳಿದ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯ ಘಟಕದ ಸಂಸ್ಥಾಪಕ ರಾಜ್ಠಾಧ್ಯಕ್ಷರು ಡಾ.ಲತಾ ಮುಳ್ಳೂರ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಶ್ರೀಮತಿ ಜ್ಯೋತಿ ಎಚ್ ,ವಿಜಯಪುರ ಜಿಲ್ಲಾ ಅಧ್ಯಕ್ಷರು ಶ್ರೀಮತಿ A. B. ನಾಯಕ. ಹಾಗೂ ರಾಜ್ಯದಿಂದ ಹಲವಾರು ಪದಾಧಿಕಾರಿಗಳು ತಿಕೋಟಾ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿಯಾದ ಶ್ರೀಮತಿ ಭಾರತಮಾತಾ ಗುಜರೆ ರವರ ಸೇವಾ ಕಾರ್ಯ ಮೆಚ್ಚಿ ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ. ಇದೇ ಸಂದರ್ಬದಲ್ಲಿ ಇಂಡಿ ತಾಲ್ಲೂಕು ಘಟಕದ ಅಧ್ಯಕ್ಷರಾದ ಕು.ಎಂ.ಸಿ.ಗಿರಣಿ ವಡ್ಡರ ರವರು ಸಹಾ ಕಳೆದ ಬಾರಿ ದ್ವಿಚಕ್ರ ವಾಹನ ಉರುಳಿಬಿದ್ದು ಗಾಯಗೊಂಡಿದ್ದ ವ್ಯಕ್ತಿಗೆ ಉಪಚರಿಸಿದ್ದ ಕ್ಷಣಗಳನ್ನು ನೆನಯಬಹುದಾಗಿದೆ.

Published by ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯಘಟಕ ಧಾರವಾಡ

ರಾಜ್ಯದ ಸರ್ಕಾರಿ,ಅನುದಾನಿತ, ಪ್ರಾಥಮಿಕ, ಪದವೀಧರ, ಹಾಗೂ ಪ್ರೌಢಶಾಲಾ ಶಿಕ್ಷಕಿಯರನ್ನೊಳಗೊಂಡ ಏಕೈಕ‌ ಸಂಘ

Leave a comment