
ತುಮಕೂರು ಜ.27 ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ (ರಿ) ರಾಜ್ಯ ಘಟಕ ಧಾರವಾಡ. ಜಿಲ್ಲಾಘಟಕ- ತುಮಕೂರು ಹಾಗೂ ತಾಲೂಕು ಘಟಕ-ತುಮಕೂರು ಇವರ ಸಹಯೋಗ ದೊಂದಿಗೆ ದಿನಾಂಕ 26/01/2022 ರಂದು ಅಪರಾಹ್ನ ಆರ್ಯಬಾಲಿಕ ಪ್ರಾಥಮಿಕ ಪಾಠ ಶಾಲೆ ಯಲ್ಲಿ ಮಾತೆ ಸಾವಿತ್ರಿಬಾಯಿ ಫುಲೆ ಹಾಗೂ ಫಾತಿಮಾ ಶೇಕ್ ರವರ ಜನ್ಮ ದಿನಾಚರಣೆ ಯನ್ನು ಆಚರಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಜಿಲ್ಲಾಧ್ಯಕ್ಷರಾದ ಶ್ರೀಮತಿ ಅನುಸೂಯ ದೇವಿ ಅವರು ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ತುಮಕೂರು ತಾಲೂಕ್ ತಹಶಿಲ್ದಾರವರು ಹಾಗೂ ತಾಲ್ಲೂಕು ದಂಡಾಧಿಕಾರಿ ಗಳಾದ ಶ್ರೀ ಮೋಹನ್ ಕುಮಾರ್ ರವರು ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತುಮಕೂರು ಜಿಲ್ಲಾಧ್ಯಕ್ಷರಾದ ನರಸಿಂಹರಾಜು ರವರು ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.


ವಿಶೇಷ ಅತಿಥಿಗಳಾಗಿ ಉಪನ್ಯಾಸ ನೀಡಲು ಸಾಹಿತಿಗಳಾದ ಶ್ರೀಮತಿ ಶೈಲಾ ನಾಗರಾಜು ರವರು ಸಹ ಭಾಗವಹಿಸದ್ದರು. ನಿರೂಪಣೆಯನ್ನು ಶ್ರೀಮತಿ ಪುಷ್ಪ ತಿಪಟೂರು ಇವರು ನಡೆಸಿಕೊಟ್ಟರು.ಶ್ರೀಮತಿ ಸುವರ್ಣ ಚಿ.ನಾ.ಹಳ್ಳಿ ಪ್ರಾರ್ಥನೆ ಸಲ್ಲಿಸಿದರೆ, ಎಲ್ಲರನ್ನೂ ತುಮಕೂರು ತಾಲೂಕ್ ಘಟಕದ ಅಧ್ಯಕ್ಷೆ ಶ್ರೀಮತಿ ಸಿದ್ದಮ್ಮನವರು ಸ್ವಾಗತಿಸಿದರು.ಮಾತೆ ಸಾವಿತ್ರಿ ಬಾಯಿ ಫುಲೆ ಹಾಗೂ ಫಾತಿಮಾ ಶೇಕ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಲಾಯಿತು,ತಾಲೂಕ್ ದಂಡಾಧಿಕಾರಿಗಳಾದ ಶ್ರೀ ಮೋಹನ್ ಕುಮಾರ್ ಅವರು ಮಾತನಾಡಿ ಸಾವಿತ್ರಿ ಬಾಯಿ ಫುಲೆ ಹಾಗೂ ಫಾತಿಮಾ ಶೇಕ್ ಅವರ ಜೀವನ ಆದರ್ಶ ಗುಣಗಳನ್ನು ಸ್ಮರಿಸಿದರು,ಎಲ್ಲರೂ ಅವರ ಆದರ್ಶಗಳನ್ನು ಅನುಸರಿಸುತ್ತ ಸಾಗಬೇಕಿದೆ ಎಂದು,ಸಂಘಕ್ಕೆ ಸಹಕಾರ ನೀಡುವ ಆಶಯ ವ್ಯಕ್ತಪಡಿಸಿದರು.



ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾದ ನರಸಿಂಹರಾಜು ರವರು ಮಾತನಾಡಿ ಸಾವಿತ್ರಿ ಬಾಯಿ ಫುಲೆ ಸಂಘಕ್ಕೆ ನಮ್ಮ ಸಂಪೂರ್ಣ ಬೆಂಬಲ ಹಾಗೂ ಸಹಕಾರ ಇದೆ ಎಂಬ ಆಶಯ ಹಾಗೂ ಭರವಸೆ ನೀಡಿದರು ಜೊತೆಗೆ ಶಿಕ್ಷಕಿಯರ ಕುಂದುಕೊರತೆಗಳ ಕುರಿತು ನೇರವಾಗಿ ಬಗೆಹರಿಸುವುದಾಗಿ ಭರವಸೆ ನೀಡಿದರು. ಅನಂತರ ಶ್ರೀಮತಿ ಶೈಲಾ ನಾಗರಾಜು ಅವರಿಂದ ಮಾತೆ ಸಾವಿತ್ರಿ ಬಾಯಿ ಫುಲೆ ಅವ್ರ ಕುರಿತಂತೆ ವಿಶೇಷ ಉಪನ್ಯಾಸ ಕಾರ್ಯಕ್ರಮ ಬಹಳ ಆಸಕ್ತಿದಾಯಕ ವಾಗಿತ್ತು.ಫುಲೆ ಅವರ ಬಾಲ್ಯ ಶಿಕ್ಷಣ ಕ್ಷೇತ್ರಕ್ಕೆ ಅವರ ಕೊಡುಗೆ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಅವರ ಹೋರಾಟ ಸಾಧನೆ ಗಳನ್ನು ತಿಳಿಸಿಕೊಟ್ಟರು.ತದ ನಂತರದಲ್ಲಿ ತುಮಕೂರು ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಆಗಮಿಸಿದ್ದ ನಿವೃತ್ತ ಶಿಕ್ಷಕರನ್ನು ಸನ್ಮನಿಸಲಾಯಿತು. ಉರ್ದು ಮಾದ್ಯಮದ ಬೋಧನಾ ಶಿಕ್ಷಕಿಯರನ್ನು ಈ ಸಂದರ್ಭದಲ್ಲಿ ಸನ್ಮಾನಿಲಾಯಿತು.ಈ ಕಾರ್ಯಕ್ರಮಕ್ಕೆ ಸಾವಿತ್ರಿ ಬಾಯಿ ಫುಲೆ ಜಿಲ್ಲಾ ಸಂಘದ ಅಧ್ಯಕ್ಷ ರಾದ ಶ್ರೀಮತಿ ಅನುಸೂಯ ದೇವಿ,ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಪ್ರವೀಣ ಕುಮಾರಿ ಹಾಗೂ ಜಿಲ್ಲಾ ಖಜಾಂಚಿಗಳಾದ ಡಾ.ಸೌಮ್ಯರವರು ಹಾಗೂ ಜಿಲ್ಲಾಪದಾಧಿಕಾರಿಗಳಾದ ವನಿತ, ಸೂರ್ಯಕಲಾ,ಸುಜಾತ ಇತರರು,
ತುಮಕೂರು ತಾಲ್ಲೂಕು ಘಟಕದಿಂದ ಸಿದ್ದಮ್ಮ,ಲತಾ,ಯಶೋದ,ಮಂಗಳಮ್ಮ,ಗೀತಾ, ರಾಧ,ಹೇಮಾ,ಗಂಗಮ್ಮ,ಭಾಗ್ಯಮ್ಮ ,ಬಾಗ್ಯಶ್ರೀ, ಲಕ್ಷ್ಮೀ,ನಜರತ್,ಉಮಾ,ಸುಮಿತ್ರಾ ಇತರರು, ಕುಣಿಗಲ್ ಘಟಕದಿಂದ ಗಂಗಮ್ಮ, ಗೀತಾಂಜಲಿ, ಶಶಿಕಲಾ ಇತರರು, ತುರುವೇಕೆರೆ ಘಟಕದಿಂದ ವನಜಾಕ್ಷಮ್ಮ,ನೇತ್ರಾವತಿ, ಪೂರ್ಣಮ್ಮ ಇತರರು, ತಿಪಟೂರು ಘಟಕದಿಂದ ವನಿತಾ, ಪುಷ್ಪ, ಮುಕ್ತಾಮಣಿ,ಸುಧಾಮಣಿ ಚಂದ್ರಮ್ಮ ಇತರರು,
ಚಿ.ನಾ.ಹಳ್ಳಿ ಘಟಕದಿಂದ ಯಶೋದ,ಸುವರ್ಣ ಹಾಗೂ ಇತರೆ ಪದಾಧಿಕಾರಿಗಳು ಬಾಗವಹಿಸಿದ್ದರು.
