PST ಶಿಕ್ಷಕಿಯರಿಂದ ಮಾನ್ಯ ಉಪನಿರ್ದೇಶಕರಿಗೆ ಚಳುವಳಿ ಪತ್ರ ರವಾನೆ

ಹೊಸಪೇಟೆ ಅ.22.ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ), ರಾಜ್ಯಘಟಕ ಧಾರವಾಡ, ಜಿಲ್ಲಾ ಘಟಕ ವಿಜಯನಗರ ವತಿಯಿಂದ PST ಶಿಕ್ಷಕಿ ವೃಂದದವರಿಂದ ಮಾನ್ಯ ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ಹಾಗೂ ಮಾನ್ಯ ಉಪನಿರ್ದೇಶಕರಿಗೆ ಚಳುವಳಿ ಪತ್ರ ರವಾನೆ ಮಾಡಲಾಗಿದೆ. ಪ್ರಾಥಮಿಕ ಶಾಲಾ ಶಿಕ್ಷಕ/ಕಿ ವೃಂದದಲ್ಲಿ C&R ನಿಯಮ ಜ್ವಲಂತ ಸಮಸ್ಯೆಯಾಗಿ ಎಲ್ಲ ಶಿಕ್ಷಕ ಸಮುದಾಯದ ಹೃದಯದಲ್ಲಿ ಅಸಮಾಧಾನದ ಅಲೆಗಳನ್ನೇ ಎಬ್ಬಿಸಿದೆ ಎಂದರೆ ನಿಜಕ್ಕೂ ತಪ್ಪಾಗದು..ಬರೆಯುವವರಿಗೆ, ತಪ್ಪಾದಾಗ ಅಳಿಸುವ ವಿಧಾನಗಳೂ ತಿಳಿದಿರುತ್ತವೆ.ಹಾಗೆಯೇ ಬರೆದಿರುವ ನಿಯಮದಲ್ಲಿ ಬದಲಾವಣೆ ಸಾಧ್ಯವೇ ಇಲ್ಲವೇ? ಪ್ರಾಥಮಿಕ ಶಾಲಾ ಶಿಕ್ಷಕ/ಕಿ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯವನ್ನು ತಡೆದು, ವರ್ಗಾವಣೆಯ ಸಮಸ್ಯೆ, ದೈಹಿಕ ಶಿಕ್ಷಕರು ಹಾಗೂ ಹಿಂದಿ ಶಿಕ್ಷಕರ ಸಮಸ್ಯೆ ಇತರೆ ಸಮಸ್ಯೆಗಳಿಗೆ ನ್ಯಾಯಸಮ್ಮತವಾದ ಪರಿಹಾರವನ್ನು ಒದಗಿಸಬೇಕಾಗಿ ಹೊಸಪೇಟೆಯ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಾಗೂ ಮಾನ್ಯ ಉಪನಿರ್ದೇಶಕರು, ವಿಜಯನಗರ ಜಿಲ್ಲೆ, ಇವರಿಗೆ ಚಳುವಳಿ ಪತ್ರವನ್ನು ರವಾನಿಸಲಾಯಿತು… ಸೇವಾಹಿರಿತನವನ್ನು ಹಾಗೂ ವಿದ್ಯಾರ್ಹತೆಯನ್ನು ಪರಿಗಣಿಸಿ ಮುಂಬಡ್ತಿ ನೀಡುವಂತೆ ಒತ್ತಾಯಿಸಲಾಯಿತು. ಮಕ್ಕಳಿಗೆ ಶೈಕ್ಷಣಿಕವಾಗಿ ತೊಂದರೆ ನೀಡದೇ ಭೋದನೆಯೊಂದಿಗೆ ಅಸಹಕಾರ ಚಳುವಳಿ ನಡೆಸುತ್ತಿರುವುದನ್ನು ಉಮಾದೇವಿಯವರು ಹೇಳಿದರು…ಜಿಲ್ಲಾಧ್ಯಕ್ಷೆ ಶ್ರೀಮತಿ ಉಮಾದೇವಿ ಮಾತನಾಡಿ , ನಮ್ಮ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯಗಳಿಗೆ ನ್ಯಾಯಸಮ್ಮತ ಪರಿಹಾರ ಒದಗಿಸಿ ಎಂದು ಸಮಸ್ತ ಶಿಕ್ಷಕ ಬಳಗದ ಪರವಾಗಿ ಕೇಳಿಕೊಂಡರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಅರುಂಧತಿ.ಎಸ್, ಗೌರವ ಅಧ್ಯಕ್ಷರಾದ ಶ್ರೀಮತಿ ಮಾಧವಿ, ಹೊಸಪೇಟೆ ತಾಲ್ಲೂಕು ಅಧ್ಯಕ್ಷೆ ಶ್ರೀಮತಿ ಹನುಮವ್ವ,ಪದಾಧಿಕಾರಿಗಳಾದ ಶ್ರೀಮತಿ ಮನೋಹರಿ, ಶ್ರೀಮತಿ ರೂಪ ಟಿಕಾರೆ, ಲಕ್ಷ್ಮಿ, ರೂಪ D.S ಇತರರು ಉಪಸ್ಥಿತರಿದ್ದರು.

Published by ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯಘಟಕ ಧಾರವಾಡ

ರಾಜ್ಯದ ಸರ್ಕಾರಿ,ಅನುದಾನಿತ, ಪ್ರಾಥಮಿಕ, ಪದವೀಧರ, ಹಾಗೂ ಪ್ರೌಢಶಾಲಾ ಶಿಕ್ಷಕಿಯರನ್ನೊಳಗೊಂಡ ಏಕೈಕ‌ ಸಂಘ

Leave a comment