ಜಿಲ್ಲಾ ಫುಲೆ ಶಿಕ್ಷಕಿಯರ ಸಂಘದ ಕಾರ್ಯಕಾರಿಣಿ ಸಭೆ ಯಶಸ್ವಿ

ವಿಜಯನಗರ ಸೆ.26 ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ (ರಿ) ರಾಜ್ಯ ಘಟಕ ಧಾರವಾಡ ಜಿಲ್ಲಾ ಘಟಕ ವಿಜಯನಗರ
ಶನಿವಾರ ನಿನ್ನೆ ಮಧ್ಯಹ್ನ1-30 ನಿಮಿಷಕ್ಕೆ ಸಭೆ ಪ್ರಾರಂಭವಾಗಿ, ಕಾರ್ಯಕ್ರಮದಲ್ಲಿ
ಶ್ರೀ ಮತಿ ರೇಶ್ಮಾ. ಕೆ.ಪ್ರಾರ್ಥನೆ ಸಲ್ಲಿಸಿದರು.
ಶ್ರೀ ಮತಿ ರೂಪ.ಡಿ.ಕೆ.ಜಿಲ್ಲಾ ಸಂಘಟನಾ ಕಾಯ೯ದಶಿ೯ ಎಲ್ಲರನ್ನೂ ಸ್ವಾಗತಿಸಿದರು.
ಎಲ್ಲಾ ತಾಲೂಕು ಮತ್ತು ಜಿಲ್ಲಾ ಪದಾಧಿಕಾರಿಗಳಿಂದ ಮಾತೆ ಸಾವಿತ್ರಿಬಾಯಿ ಫುಲೆ ಭಾವಚಿತ್ರಕ್ಕೆ ಪುಷ್ಪಾಚ೯ನೆ ಮಾಡಲಾಯಿತು.
ಈ ಸಭೆಯ ಇಂದಿನ ಪ್ರಸ್ತಾವಿಕ ನುಡಿ ತಾಲೂಕು ಘಟಕ ಹೊಸಪೇಟೆಯ ಅಧ್ಯೆಕ್ಷೆಯಾದ ಶ್ರೀಮತಿ ಹನುಮಕ್ಕನವರು ನಡೆಸಿಕೊಟ್ಟರು.ವಿಜಯನಗರ ಜಿಲ್ಲೆಯ ತಾಂತ್ರಿಕ ಸಮಿತಿಯ ಪರಿಚಯ ಶ್ರೀಮತಿ ಡಾ. ಉಷರಾಣಿ ಹೊಸಪೇಟೆ ಪ್ರಧಾನಕಾಯ೯ದಶಿ೯ಯವರು ಪರಿಚಯಿಸಿದರು.ನಂತರ ಬಂದಂಥ ಎಲ್ಲಾ ಪದಾಧಿಕಾರಿಗಳ ಅನಿಸಿಕೆಗಳನ್ನು ಹಂಚಿಕೊಳ್ಳಲು ತಿಳಿಸಲಾಯಿತು.
ವಿಜಯನಗರ ಜಿಲ್ಲಾ ಅಧ್ಯಕ್ಷರಾದ ಉಮಾದೇವಿ ಸಂಘದ ಚರ್ಚಾ ವಿಷಯವನ್ನು ಈ ಕೆಳಗಿನಂತೆ ತಿಳಿಸಿದರು.

  1. ಜಿಲ್ಲಾ ಘಟಕದ ಉದ್ಘಾಟನ ಕಾಯ೯ಕ್ರಮದ ಬಗ್ಗೆ.
    2.ಮಹಿಳಾ ಶಿಕ್ಷಕಿಯರ ಸದಸ್ಯತ್ವದ ರಷೀದಿ ಬಗ್ಗೆ ಮಾಹಿತಿ.
    3.ಎಲ್ಲಾ ತಾಲೂಕುಗಳಲ್ಲಿ ತಾಂತ್ರಿಕ ಸಮೀತಿ ರಚನೆಯ ಬಗ್ಗೆ ಮಾಹಿತಿ.
    4.ಸಾವಿತ್ರಿಬಾಯಿ ಫುಲೆ ಜನ್ಮ ದಿನಾಚರಣೆಯ ನಿಮಿತ್ಯ ವಿಡಿಯೋ ಮಾಡುವ ಬಗ್ಗೆ
    5.ತಾಲೂಕು ಹಂತದಲ್ಲಿ ಸಂಘದ ಬ್ಯಾಂಕ್ ಖಾತೆ ತೆರೆಯುವ ಬಗ್ಗೆ ಮಾಹಿತಿ ಕೊಡಲಾಯಿತು.
    ಚಚೆ೯ಯಲ್ಲಿ ವಿಜಯನಗರ ಜಿಲ್ಲೆಯ ಎಲ್ಲಾ ತಾಲೂಕಿನ ಅಧ್ಯಕ್ಷರು ,ಪ್ರಧಾನಕಾಯ೯ದಶಿ೯ಗಳು , ಕೋಶಾಧ್ಯಕ್ಷರು ,ಗೌರವಾಧ್ಯಕ್ಷರು ,ಉಪಾಧ್ಯಕ್ಷರು ,ಸಂಘಟನಾಕಾಯ೯ದಶಿ೯ಗಳು ,ಸಹಕಾಯ೯ದಶಿ೯ಗಳು ಎಲ್ಲರೂ ಈ ಸಭೆಯಲ್ಲಿ ಉಪಸ್ಥಿತರಿದ್ದರು .
    ಈ ಎಲ್ಲಾ ಕಾಯ೯ಕ್ರಮದ ನಿರೂಪಣೆಯನ್ನು ವಿಜಯನಗರ ಜಿಲ್ಲೆಯ ಪ್ರಧಾನಕಾ೯ದಶಿ೯ಯಾದ ಶ್ರೀ ಮತಿ ಅರುಂಧತಿ ಇವರು ತುಂಬಾ ಚೆನ್ನಾಗಿ ನಡೆಸಿಕೊಟ್ಟರು.

Published by ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯಘಟಕ ಧಾರವಾಡ

ರಾಜ್ಯದ ಸರ್ಕಾರಿ,ಅನುದಾನಿತ, ಪ್ರಾಥಮಿಕ, ಪದವೀಧರ, ಹಾಗೂ ಪ್ರೌಢಶಾಲಾ ಶಿಕ್ಷಕಿಯರನ್ನೊಳಗೊಂಡ ಏಕೈಕ‌ ಸಂಘ

Leave a comment