ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ ಜನರ ಜೀವನ ಮಟ್ಟ ಸುಧಾರಣೆ ಗುರಿಯೊಂದಿಗೆ ಸಾಗಿರುವ ಜ್ಞಾನಬಿಕ್ಷಾ ಪಾದಯಾತ್ರಿಗಳಾದ ಶ್ರೀ ವಿವೇಕಾನಂದ ಅವರೊಂದಿಗೆ ಸಂವಾದ ಸಭೆ ನಡೆಸಿದ ಸಾವಿತ್ರಿಬಾಯಿಪುಲೆ ಶಿಕ್ಷಕರ ಸಂಘ

ಕರ್ನಾಟಕ ರಾಜ್ಯ ಸಾವಿತ್ರಿಬಾಯಿಪುಲೆ ಶಿಕ್ಷಕಿಯರ ಸಂಘ ರಿಜಿಸ್ಟರ್ ರಾಜ್ಯ ಘಟಕ ಧಾರವಾಡ ಜಿಲ್ಲಾ ಘಟಕ ತುಮಕೂರು ತಾಲೂಕು ಘಟಕ ಗುಬ್ಬಿ
ದಿನಾಂಕ 20 ಸೆಪ್ಟೆಂಬರ್ 2021ರ ಸೋಮವಾರದಂದು ಜ್ಞಾನ ಬಿಕ್ಷಾ ಪಾದಯಾತ್ರಿಗಳಾದ ಶ್ರೀ ವಿವೇಕಾನಂದ ಹೆಚ್ ಕೆ ರವರು ಗುಬ್ಬಿ ತಾಲೂಕಿನ ಪ್ರವಾಸಿ ಮಂದಿರದಲ್ಲಿ ತಂಗಿರುವುದನ್ನು ತಿಳಿದ ಗುಬ್ಬಿ ತಾಲೂಕಿನ ಸಾವಿತ್ರಿಬಾಯಿಪುಲೆ ಶಿಕ್ಷಕಿಯರ ಸಂಘದ ಪದಾಧಿಕಾರಿಗಳು ಅವರನ್ನು ಸ್ವಾಗತಿಸಿ ಸನ್ಮಾನಿಸಲು ಪ್ರವಾಸಿ ಮಂದಿರಕ್ಕೆ ತೆರಳಿ ಅವರೊಂದಿಗೆ ಸಂವಾದ ಕಾರ್ಯಕ್ರಮವನ್ನು ನಡೆಸಿದರು


ಈ ಕಾರ್ಯಕ್ರಮಕ್ಕೆ ಶ್ರೀಯುತ ರಂಗಸ್ವಾಮಯ್ಯ ಸರ್ ಅವರು ಎಲ್ಲರನ್ನೂ ಸ್ವಾಗತಿಸಿದರು ನಂತರ ವಿವೇಕಾನಂದ ಸರ್ ಅವರು ಮಾತನಾಡಿ ಸಮಾಜದ ಜನರ ಜೀವನಮಟ್ಟ ಸುಧಾರಣೆ ಗುರಿಯೊಂದಿಗೆ ನಾನು ಪಾದಯಾತ್ರೆಯನ್ನು ಕೈಗೊಂಡಿರುವೆ ಕರ್ನಾಟಕದಾದ್ಯಂತ ಪಾದಯಾತ್ರೆಯನ್ನು ಕೈಗೊಂಡು ಎಲ್ಲ ಇಲಾಖೆಗಳಲ್ಲೂ ನಡೆಯುತ್ತಿರುವ ಭ್ರಷ್ಟತೆಯನ್ನು ಕಡಿಮೆಮಾಡುವ ಉದ್ದೇಶ ಹೊಂದಿದ್ದೇನೆ ಒಮ್ಮೆಲೆ ಎಲ್ಲವನ್ನೂ ಬದಲಾಯಿಸಲು ಸಾಧ್ಯವಿಲ್ಲ ಇದೊಂದು ಆಂದೋಲನವಾಗಿದೆ ಎಲ್ಲ ಇಲಾಖೆಗಳಲ್ಲಿರುವ ಒಳ್ಳೆಯವರನ್ನು ಗುರುತಿಸಿ ಅವರನ್ನು ಒಳ್ಳೆತನವನ್ನು ಮೇಲೆ ತರುವುದು ಹಾಗೂ ಕೆಟ್ಟದ್ದನ್ನು ಕಡಿಮೆ ಮಾಡುವ ಪಣತೊಟ್ಟಿರುವೆ ಭ್ರಷ್ಟತೆಯ ಮಟ್ಟ ಪೂರ್ತಿ ನಿರ್ಮೂಲನೆಯಾಗದಿದ್ದರೂ ಕ್ರಮೇಣ ಕಡಿಮೆಯಾದರೆ ನನ್ನ ಆಂದೋಲನಕ್ಕೆ ಪಾದಯಾತ್ರೆಗೆ ಜಯ ಸಿಕ್ಕಂತೆ ಎಂದು ಹೇಳಿದರು ನಂತರ ಸುರೇಶ್ ಸರ್ ಅವರು ಮಾತನಾಡಿ ವಿವೇಕ್ ಸರ್ ಅವರ ಉದ್ದೇಶ ಅತ್ಯಮೂಲ್ಯವಾದದ್ದು ಅವರ ಪಾದಯಾತ್ರೆಗೆ ಜಯ ಸಿಗಲಿ ಎಂದು ಆಶಿಸಿದರು ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಯರ ಸಂಘ ಗುಬ್ಬಿ ತಾಲೂಕು ಘಟಕದ ವತಿಯಿಂದ ಸರ್ ರವರನ್ನು ಸನ್ಮಾನಿಸಲಾಯಿತು ಶ್ರೀಯುತ ರವೀಶ್ ಸರ್ ಅವರು ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಲ್ಲರಿಗೂ ಧನ್ಯವಾದ ತಿಳಿಸಿದರು
ಈ ಕಾರ್ಯಕ್ರಮದಲ್ಲಿ ತಾಲೂಕು ಘಟಕದ ಅಧ್ಯಕ್ಷರಾದ ಲಕ್ಷ್ಮಿ ಎಸ್ ವಿ ರವರು ಕಾರ್ಯದರ್ಶಿಯವರಾದ ಭಾರತಿ ಭಾಯಿ ರವರು ಪದಾಧಿಕಾರಿಗಳಾದ ಲೀಲಾವತಿ ಪದ್ಮಾವತಿ ತಿಮ್ಮಮ್ಮ ಮಂಜಮ್ಮ ಚಂದ್ರಕಲಾ ಮುಂತಾದವರು ಹಾಜರಿದ್ದರು
