ಕರ್ನಾಟಕ ರಾಜ್ಯ ಸಾವಿತ್ರಿಬಾಯಿಪುಲೆ ಶಿಕ್ಷಕಿಯರ ಸಂಘ (ರಿ) ರಾಜ್ಯ ಘಟಕ ಧಾರವಾಡ, ಜಿಲ್ಲಾ ಘಟಕ ತುಮಕೂರು, ತಾಲೂಕು ಘಟಕ ಗುಬ್ಬಿ
ದಿನಾಂಕ 15 ಸೆಪ್ಟೆಂಬರ್ 2021ರ ಬುಧವಾರದಂದು ಗುಬ್ಬಿ ತಾಲೂಕಿನ ಬೆಲವತ್ತ ಕ್ಲಸ್ಟರ್ ನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಬಿ ಕೋಡಿಹಳ್ಳಿ ಯಲ್ಲಿ ಶಿಕ್ಷಕರ ದಿನಾಚರಣೆ ಜೊತೆಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಿಗೆ ಲಯನ್ಸ್ ಕ್ಲಬ್ ಗುಬ್ಬಿ ವತಿಯಿಂದ ಸನ್ಮಾನ ಕಾರ್ಯಕ್ರಮ ಹಾಗೂ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ವತಿಯಿಂದ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ಮತ್ತು ಲೇಖನ ಸಾಮಗ್ರಿಗಳ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು



ಸಸಿಗಳನ್ನು ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಾಯಿತು ಶಾಲಾ ಮಕ್ಕಳು ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಜಿಲ್ಲಾ ಪ್ರಶಸ್ತಿ ವಿಜೇತರಾದ ಶ್ರೀಯುತ ರಂಗಸ್ವಾಮಿ ಸರ್ ಅವರು ಕಾರ್ಯಕ್ರಮಕ್ಕೆ ಎಲ್ಲರನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದರು
ಕಾರ್ಯಕ್ರಮದಲ್ಲಿ ಹಾಜರಿದ್ದ ಎಲ್ಲ ಗಣ್ಯರು ದೀಪಬೆಳಗಿಸಿ ನಂತರ ರಾಧಾಕೃಷ್ಣನ್ ಹಾಗೂ ಸಾವಿತ್ರಿಬಾಯಿ ಪುಲೆಯವರ ಫೋಟೋಗಳಿಗೆ ಪುಷ್ಪ ನಮನ ಸಲ್ಲಿಸಿದರು
ನಂತರ ಪ್ರಾಸ್ತಾವಿಕ ನುಡಿಗಳನ್ನಾಡಿದ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀಮತಿ ಅನಸೂಯಾದೇವಿ ಅವರು ಮಾತನಾಡಿ ಗುಬ್ಬಿ ತಾಲೂಕಿನಲ್ಲಿ ಸಂಘದ ಚಟುವಟಿಕೆಗಳು ಅತ್ಯುತ್ತಮ ರೀತಿಯಲ್ಲಿ ನಡೆಯುತ್ತಿದ್ದು ಇದಕ್ಕೆಲ್ಲಾ ಕಾರಣರಾದ ಸಂಘದ ಬೆನ್ನೆಲುಬು ಗಳಂತೆ ಇರುವ ಶ್ರೀಯುತ ರಂಗಸ್ವಾಮಿ ಸರ್ ರವಿ ಸರ್ ಹಾಗೂ ಸುರೇಶ್ ಸರ್ ಅವರನ್ನು ತಮ್ಮ ಸಹೋದರರು ಎಂದು ಗುಬ್ಬಿ ತಾಲೂಕು ನನ್ನ ತವರುಮನೆ ಎಂದು ಭಾವನಾತ್ಮಕವಾಗಿ ಮಾತನಾಡಿದರು ಜೊತೆಗೆ ಮಾತೃಸಂಘ ಶಿಕ್ಷಕರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಲ್ಲಿ ನಮ್ಮ ಸಂಘವು ಯಾವ ಸಂಘದ ವಿರೋಧಿಯೂ ಅಲ್ಲ ನಾವು ನಿಮ್ಮ ಜೊತೆಗಿರುತ್ತೇವೆ ನಮ್ಮನ್ನು ನಿಮ್ಮ ಕೆಲಸಕಾರ್ಯಗಳಿಗೆ ಆಹ್ವಾನಿಸಿ ನಾವು ನಮ್ಮ ಕಾರ್ಯಕ್ರಮಗಳಿಗೆ ನಿಮ್ಮನ್ನು ಆಹ್ವಾನಿಸುತ್ತೇವೆ ಎಂದರು.


ನಂತರ ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷರಾದ ಶ್ರೀಯುತ ಉಮೇಶ ರವರು ಮಾತನಾಡಿ ಸಾವಿತ್ರಿಬಾಯಿಪುಲೆ ಶಿಕ್ಷಕಿಯರ ಸಂಘದ ಜೊತೆ ಯಾವಾಗಲೂ ನಾವು ಕೈಜೋಡಿಸುತ್ತೇವೆ ಎಂದು ಹೇಳಿದರು ಲಯನ್ಸ್ ಕ್ಲಬ್ ಅಧ್ಯಕ್ಷರಾದ ಶ್ರೀ ಮಲ್ಲಪ್ಪನವರು ಮಾತನಾಡಿ ಅವರು ಕೂಡ ಸಾವಿತ್ರಿಬಾಯಿಪುಲೆ ಶಿಕ್ಷಕಿಯರ ಸಂಘ ಉತ್ತಮ ಕೆಲಸ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿದ್ದು ಇದಕ್ಕೆ ಸದಾ ನಮ್ಮ ಬೆಂಬಲವಿರುತ್ತದೆ ಎಂದು ಹೇಳಿದರು
ಗುಬ್ಬಿ ತಾಲೂಕಿನ ಅಕ್ಷರದಾಸೋಹ ಅಧಿಕಾರಿಗಳಾದ ಶ್ರೀಯುತ ಯೋಗಾನಂದ ರವರು ಮಾತನಾಡಿ ಸಂಘಟನೆ ಮಾಡಲು ಎಲ್ಲರಿಗೂ ಹಕ್ಕಿದೆ ನಾನು ಕೂಡ ಸಂಘಟನೆಗಾಗಿ ಹೋರಾಡಿದವನು ತಾಲೂಕಿನ ಎಲ್ಲಾ ಸಂಘಗಳು ಸಂಘಟನೆಗಳು ಕೈಜೋಡಿಸಿಕೊಂಡು ಕೆಲಸಕಾರ್ಯಗಳನ್ನು ಕಾರ್ಯಕ್ರಮಗಳನ್ನು ಮಾಡುತ್ತ ಮುನ್ನಡೆಯಬೇಕು ಎಲ್ಲಾ ಸಂಘ ಹಾಗೂ ಸಂಘಟನೆಗಳ ಉದ್ದೇಶವೂ ಒಂದೇ ಶಿಕ್ಷಕ ಶಿಕ್ಷಕಿಯರ ಹಿತ ಕಾಪಾಡುವುದು ಆದುದರಿಂದ ಎಲ್ಲರೂ ಒಗ್ಗಟ್ಟಿನಿಂದ ಕೆಲಸವನ್ನು ಮಾಡುತ್ತಾ ಮುನ್ನಡೆಯಿರಿ ಎಂದು ಎಲ್ಲರಿಗೂ ಕಿವಿಮಾತು ಹೇಳಿದರು ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಯುತ ರಂಗಸ್ವಾಮಿ ಸರ್ ಅವರು ಕಾರ್ಯಕ್ರಮಕ್ಕೆ ಹಾಜರಿದ್ದ ಎಲ್ಲಾ ಗಣ್ಯರನ್ನು ಸನ್ಮಾನಿಸಿದರು
ಗುಬ್ಬಿ ತಾಲೂಕಿನ ಲಯನ್ಸ್ ಕ್ಲಬ್ ವತಿಯಿಂದ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಶ್ರೀಯುತ ರಂಗಸ್ವಾಮಿಯವರು ಶ್ರೀಯುತ ರವೀಶ್ ರವರು ಹಾಗೂ ಪ್ರೌಢಶಾಲಾ ವಿಭಾಗದ ಚಿತ್ರಕಲಾ ಶಿಕ್ಷಕರಾದ ಶ್ರೀಯುತ ರಂಗಸ್ವಾಮಿ ರವರನ್ನು ಸನ್ಮಾನಿಸಲಾಯಿತು ಹಾಗೆಯೇ ಕಾರ್ಯಕ್ರಮಕ್ಕೆ ಆಗಮಿಸಿದ್ದ ಇತರೆ ಗಣ್ಯರು ಹಾಗೂ ಶಿಕ್ಷಕ-ಶಿಕ್ಷಕಿಯರು ಕೂಡ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರನ್ನು ವೈಯಕ್ತಿಕವಾಗಿ ಸನ್ಮಾನಿಸಿದರು
ಲಯನ್ಸ್ ಕ್ಲಬ್ ವತಿಯಿಂದ ಶಾಲಾ ಮಕ್ಕಳಿಗೆ ಬ್ಯಾಗ್ ಗಳನ್ನು ಹಾಗೂ ಸಾವಿತ್ರಿಬಾಯಿಪುಲೆ ಶಿಕ್ಷಕಿಯರ ಸಂಘದವತಿಯಿಂದ ಲೇಖನ ಸಾಮಗ್ರಿಗಳು ಹಾಗೂ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು



ಈ ಕಾರ್ಯಕ್ರಮದಲ್ಲಿ ಗುಬ್ಬಿ ತಾಲೂಕಿನ ಅಕ್ಷರದಾಸೋಹ ಅಧಿಕಾರಿಗಳಾದ ಶ್ರೀಯುತ ಯೋಗಾನಂದ ರವರು
ಲಯನ್ಸ್ ಕ್ಲಬ್ನ ಅಧ್ಯಕ್ಷರಾದ ಮಲ್ಲಪ್ಪನವರು ಗುಬ್ಬಿ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಗೊರವಯ್ಯ ನವರು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಉಮೇಶ್ ಸರ್ ಅವರು ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ತುಮಕೂರು ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷರಾದ ಶ್ರೀಮತಿ ಅನಸೂಯಾ ದೇವಿಯವರು ಬೆಲವತ್ತ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ರೂಪ ಅವರು ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಗುಬ್ಬಿ ತಾಲೂಕಿನ ಅಧ್ಯಕ್ಷರಾದ ಶ್ರೀಮತಿ ಲಕ್ಷ್ಮಿಯವರು ಕೊರಟಗೆರೆ ತಾಲೂಕು ಘಟಕದ ಅಧ್ಯಕ್ಷರಾದ ಶ್ರೀಮತಿ ಸುಜಾತಾ ರವರು ಜಿಲ್ಲಾ ಪ್ರಧಾನ ಕಾರ್ಯದರ್ಶಿಯವರಾದ ಶ್ರೀಮತಿ ಪ್ರವೀಣ ಕುಮಾರಿಯವರು ಗುಬ್ಬಿ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿಯಾದ ಶ್ರೀಮತಿ ಭಾರತಿ ಬಾಯಿ ಹಾಗೂ ಖಜಾಂಚಿ ಆದ ಶ್ರೀಮತಿ ಅನಿತಾ ಪದಾಧಿಕಾರಿಗಳಾದ ಶ್ರೀಮತಿ ವಿಶಾಲಾಕ್ಷಿ ಶ್ರೀಮತಿ ಲೀಲಾವತಿ ಹೆಚ್ ಬಿ ಶ್ರೀಮತಿ ಪುಷ್ಪ ಶ್ರೀಮತಿ ಲೀಲಾವತಿ ಶ್ರೀಮತಿ ದಾಕ್ಷಾಯಣಮ್ಮ ಶ್ರೀಮತಿ ರಾಜಮ್ಮ ಗುಬ್ಬಿ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಶ್ರೀಯುತ ಎಚ್ ಕೆ ಶಶಿಧರ್ ಶ್ರೀಯುತ ಶಿವಣ್ಣ ಶ್ರೀಯುತ ಅರುಣ್ ಕುಮಾರ್ ಶ್ರೀಯುತ ಸಿದ್ದಲಿಂಗೇಗೌಡ ಗುಬ್ಬಿ ತಾಲೂಕಿನ NPS ಸಂಘದ ಅಧ್ಯಕ್ಷರಾದ ಶ್ರೀಯುತ ಪ್ರಸಾದ್ ರವರು ಶಾಲೆಯ ಎಸ್ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರು ಬೆಲವತ್ತ ಕ್ಲಸ್ಟರ್ ನ ಶಿಕ್ಷಕ ಶಿಕ್ಷಕಿಯರು ಗ್ರಾಮಸ್ಥರು ಹಾಜರಿದ್ದರು ಶಾಲೆಯ ಅಡುಗೆ ಸಿಬ್ಬಂದಿಯವರು ಎಲ್ಲರಿಗೂ ಹೋಳಿಗೆ ಊಟವನ್ನು ತಯಾರಿಸಿದ್ದು ಊಟವು ತುಂಬಾ ರುಚಿಕರವಾಗಿತ್ತು ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಯುತ ರಂಗಸ್ವಾಮಿ ಸರ್ ಅವರು ಕಾರ್ಯಕ್ರಮವನ್ನು ತುಂಬಾ ಅಚ್ಚುಕಟ್ಟಾಗಿ ಏರ್ಪಡಿಸಿದ್ದರು ಸರ್ ಅವರಿಗೆ ಕರ್ನಾಟಕ ರಾಜ್ಯ ಸಾವಿತ್ರಿಬಾಯಿಪುಲೆ ಶಿಕ್ಷಕಿಯರ ಸಂಘ ತಾಲೂಕು ಘಟಕ ಗುಬ್ಬಿ ವತಿಯಿಂದ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಲಾಯಿತು



