NPS ಶಿಕ್ಷಕರ ಅಕಾಲಿಕ ಮರಣ,ಮೃತರ ಕುಟುಂಬಕ್ಕೆ 1ಲಕ್ಷ ರೂ ಧನ ಸಹಾಯ

ಶಿಕಾರಿಪುರ,ಸೆ.06 ತಾಲ್ಲೂಕಿನ GHPS ಹರಗಿ ಶಾಲೆಯ ಶಿಕ್ಷಕರಾದ ಶ್ರೀಯುತ ದಿನೇಶ್ ರವರು ಇತ್ತೀಚೆಗೆ ಅಕಾಲಿಕ ಮರಣ ಹೊಂದಿದ್ದು, ಸದರಿ ಶಿಕ್ಷಕರು NPS ಯೋಜನೆಗೆ ಒಳಪಟ್ಟವರಾಗಿದ್ದು ನಮ್ಮೆಲ್ಲರಿಗೂ ಗೊತ್ತಿರುವಂತೆ NPS ಯೋಜನೆಗೆ ಒಳಪಡುವ ನೌಕರರ ಮರಣ ಉಪಧನವು ಅತಿ ಕಡಿಮೆ ಇರುತ್ತದೆ. ಇಂತಹ ಸ್ಥಿತಿಯಲ್ಲಿ
ಮೃತ ಶಿಕ್ಷಕರ ತಾಯಿಯವರು ಕ್ಯಾನ್ಸರ್ ಖಾಯಿಲೆಯಿಂದ ಬಳಲುತಿದ್ದು ಅವರ ಕುಟುಂಬ ಸಂಕಷ್ಟದಲ್ಲಿ ಸಿಲುಕಿದೆ. ಈ ಕುಟುಂಬಕ್ಕೆ ಸಹಾಯ ಹಸ್ತ ನೀಡಲು ಶಿಕಾರಿಪುರ ಘಟಕದ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ಹಾಗೂ NPS ಶಿಕ್ಷಕರ ಸಂಘಗಳ ವತಿಯಿಂದ 1 ಲಕ್ಷ ರೂ ಹಣದ ಚೆಕ್ ನ್ನು ಸೆಪ್ಟಂಬರ್-05 ಶಿಕ್ಷಕರ ದಿನಾಚರಣೆಯಂದು ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಕೆ ಎಸ್ ಗುರುಮೂರ್ತಿಯವರ ಮುಖಾಂತರ  ವಿತರಿಸಲಾಯಿತು ಎಂದು ಶಿಕಾರಿಪುರದ ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷರಾದ ಶ್ರೀಮತಿ ಲಕ್ಷ್ಮವ್ವ ಎಂ ಸುಣಗಾರ್ ತಿಳಿಸಿದ್ದಾರೆ.

Published by ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯಘಟಕ ಧಾರವಾಡ

ರಾಜ್ಯದ ಸರ್ಕಾರಿ,ಅನುದಾನಿತ, ಪ್ರಾಥಮಿಕ, ಪದವೀಧರ, ಹಾಗೂ ಪ್ರೌಢಶಾಲಾ ಶಿಕ್ಷಕಿಯರನ್ನೊಳಗೊಂಡ ಏಕೈಕ‌ ಸಂಘ

Leave a comment