ಶಾಸಕರಿಗೆ ಹಾಗೂ ತಾಲ್ಲೂಕಿನ ಅಧಿಕಾರಿಗಳಿಗೆ ವಿವಿಧ ಸೌಲಭ್ಯ ಕೋರಿ ಮನವಿ ಪತ್ರ ಸಲ್ಲಿಸಿದ ಫುಲೆ ಶಿಕ್ಷಕಿಯರ ಸಂಘ

ಸಂಡೂರು ಆಗಸ್ಟ್-01 ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ ತಾಲೂಕು ಘಟಕ ಸಂಡೂರಿನಿಂದ, ಅಧ್ಯಕ್ಷರಾದ ಪ್ರೇಮ. ಕೆ , ಪ್ರಧಾನ ಕಾರ್ಯದರ್ಶಿಗಳಾದ ಅರ್ಚನಾ. ಕೆ, ಉಪಾಧ್ಯಕ್ಷರಾದ ಡಾ. ಉಮಾ, ಉಪಾಧ್ಯಕ್ಷರಾದ ಸುನಿತಾ ಕುಮಾರಿ ಟಿ. ಕೆ , ಸಂಘಟನಾ ಕಾರ್ಯದರ್ಶಿಗಳಾದ ನೂರುನ್ನಿಸ ಹಾಜರಿದ್ದು,, ಇನ್ನಿತರ ಸಂಘದ ಸದಸ್ಯರಾದ ಇಸ್ಮಾಯಿಲ್ ಸರ್, ನೂರುಲ್ಲಾ ಸರ್, ಷಣ್ಮುಖಪ್ಪ ಸರ್ ಮತ್ತು ಸಿದ್ದೇಶ್ ಸರ್ ಇವರೆಲ್ಲರ ಸಹಯೋಗದೊಂದಿಗೆ ಸನ್ಮಾನ್ಯ ಶ್ರೀ ಮಾಜಿ ಸಚಿವರು ಹಾಗೂ ಶಾಸಕರಾದ
ಈ.ತುಕಾರಾಮ್ ರವರನ್ನು ಭೇಟಿಯಾಗಿ (1)ಸಿ ಅಂಡ್ ಆರ್ ನೀತಿ ತಿದ್ದುಪಡಿ , (2)ಹಳ್ಳಿಗಳಿಗೆ ಬಸ್ಸುಗಳ ವ್ಯವಸ್ಥೆ ಕಲ್ಪಿಸಿ ಕೊಡುವುದು, (3)ವರ್ಗಾವಣೆ ಸಮಸ್ಯೆ, (4)ಬಡ್ತಿ ಸಮಸ್ಯೆಯ ಬಗ್ಗೆ, (5)ವಿದ್ಯಾರ್ಥಿವೇತನ ಸಮಸ್ಯೆ , (6)ಹಿಂದಿ ಶಿಕ್ಷಕರ ಸಮಸ್ಯೆ ಬಗ್ಗೆ ಮನವಿ ಸಲ್ಲಿಸಲಾಯಿತು,ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಶಾಸಕರು ನಿಮ್ಮ ಎಲ್ಲಾ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇನೆ ಎಂದು ಭರವಸೆಯನ್ನು ನೀಡಿದ್ದಾರೆ.ಹಾಗೂ

ಬಸ್ ಡಿಪೋ ಮ್ಯಾನೇಜರ್ ರವರಿಗೆ ಕರೆಮಾಡಿ ಹಳ್ಳಿಗಳಿಗೆ ಬಸ್ಸುಗಳನ್ನು ಬಿಡುವಂತೆ ಹೇಳಿದರು.
ನಂತರ ತಾಲೂಕು ಕಚೇರಿಗೆ ಹೋಗಿ ಮಾನ್ಯ ತಹಶೀಲ್ದಾರ್ ಮೇಡಂ ರವರಿಗೆ (7)ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಇರುವ ಆಧಾರ್ ಕಾರ್ಡ್ ಸಮಸ್ಯೆ, (8)ವಿದ್ಯಾರ್ಥಿವೇತನದ ಸಮಸ್ಯೆ ಬಗ್ಗೆ ಮತ್ತು (9)ವಿದ್ಯಾರ್ಥಿಗಳಿಗೆ ಸುಲಭವಾಗಿ ಬ್ಯಾಂಕ್ ಖಾತೆ ತೆರೆಯಲು ಸಹಾಯವಾಗುವಂತೆ ಮನವಿಯನ್ನು ಸಲ್ಲಿಸಲಾಯಿತು ,ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ತಹಶೀಲ್ದಾರ್ ಮೇಡಂ ರವರು ಪ್ರತಿ ಗ್ರಾಮ ಪಂಚಾಯಿತಿಗೆ ಆಧಾರ್ ಕಾರ್ಡ್ ಮಾಡುವವರನ್ನು ಕಳುಹಿಸುತ್ತೇವೆ ಒಂದು ದಿನಾಂಕವನ್ನು ಹೇಳುತ್ತೇವೆ , ಆ ದಿನಾಂಕದಂದು ಶಿಕ್ಷಕರು ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಹೇಳಿದರು,ಹಾಗೂ ಸೋಮವಾರದ ದಿನ ಎಲ್ಲಾ (10)ಬ್ಯಾಂಕುಗಳಿಗೆ ಝೀರೋ ಬ್ಯಾಲೆನ್ಸ್ ಅಕೌಂಟ್ ಓಪನ್ ಮಾಡಿಕೊಡುವಂತೆ ಆರ್ಡರ್ ಕಳುಹಿಸುವುದಾಗಿ ಹೇಳಿರುತ್ತಾರೆ,


ನಂತರ ತಾಲೂಕು ಕಚೇರಿಗೆ ಹೋಗಿ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಭೇಟಿಯಾಗಿ (11)ಮಹಿಳಾ ವಿಶ್ರಾಂತಿ ಕೊಠಡಿ, (12)ಶಾಲಾ ಕಾಂಪೌಂಡ್ ನಿರ್ಮಾಣ,
(13)ಶೌಚಾಲಯ ನಿರ್ಮಾಣ, (14)ಶಾಲಾ ಕಾಂಪೌಂಡ್ ಗಳಿಗೆ ಗ್ರಿಲ್ ಹಾಕಿಸಿ ಕೊಡುವಂತೆ ಹಾಗೂ (15)ಪ್ರತಿ ಶಾಲೆಗಳಿಗೂ ಶೌಚಾಲಯಗಳನ್ನು ಸ್ವಚ್ಛಗೊಳಿಸಲು ಗ್ರಾಮ ಪಂಚಾಯಿತಿ ಕಡೆಯಿಂದ ವ್ಯವಸ್ಥೆ ಮಾಡಲು ಮನವಿಯನ್ನು
ಸಲ್ಲಿಸಲಾಯಿತು. ನಮ್ಮ ಮನವಿಗೆ ಸ್ಪಂದಿಸಿದ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರತಿ ಗ್ರಾಮ ಪಂಚಾಯಿತಿಯಿಂದ ಎಲ್ಲಾ ಶಾಲೆಗಳಿಗೂ ವಾರಕ್ಕೆರಡು ಬಾರಿ ಶೌಚಾಲಯ ಸ್ವಚ್ಛತೆಗೆ ವ್ಯವಸ್ಥೆ ಮಾಡಿಸುತ್ತೇವೆ ಎಂದು ಹೇಳಿರುತ್ತಾರೆ ಮತ್ತು ಮಹಿಳೆಯರ ವಿಶ್ರಾಂತಿ ಕೊಠಡಿಗೆ ವ್ಯವಸ್ಥೆ ಮಾಡಿಸುತ್ತೇವೆ ಎಂದು ತಿಳಿಸಿ ಸಹಕರಿಸಿರುತ್ತಾರೆ,


ನಂತರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗೆ ಹೋಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಭೇಟಿ ಮಾಡಿ(16) ಸಿ ಅಂಡ್ ಆರ್ ರೂಲ್ಸ್ ತಿದ್ದುಪಡಿ,(17)ವರ್ಗಾವಣೆ ಸಮಸ್ಯೆ (18)ಹಿಂದಿ ಶಿಕ್ಷಕರ ಸಮಸ್ಯೆ ಹಾಗೂ (19) ಶಿಕ್ಷಕ ಮಿತ್ರ ಆಪ್ ಮತ್ತು ಮಾಹಿತಿ ತಂತ್ರಜ್ಞಾನದ ಬಗ್ಗೆ ತಿಳಿಯಲು ಎಲ್ಲಾ ಶಿಕ್ಷಕರಿಗೂ ಒಂದು ದಿನದ ತರಬೇತಿಯನ್ನು ಕೊಡುವಂತೆ ಮನವಿಯನ್ನು ಸಲ್ಲಿಸಲಾಯಿತು,(20)GPT ಗಳ ಪರಿವೀಕ್ಷಣಾ ಅವಧಿ ಪೂರ್ಣ ಗೊಂಡಿರುವುದನ್ನು ಸೇವಾ ಪುಸ್ತಕದಲ್ಲಿ ನಮೂದಿಸುವ ಕುರಿತು ಮನವಿ ಸಲ್ಲಿಸಲಾಯಿತು, (21)ಕೋವಿಡ್-19 ನಿಂದ ಮರಣ ಹೊಂದಿದ ಶಿಕ್ಷಕರಿಗೆ ಮತ್ತು (22)ನಿವೃತ್ತಿ ಹೊಂದಿದ ಶಿಕ್ಷಕರಿಗೆ ಒದಗಿಸಬೇಕಾದ ಪರಿಹಾರ ಸೌಲಭ್ಯಗಳನ್ನು ಒದಗಿಸುವಂತೆ ಮನವಿ ಸಲ್ಲಿಸಲಾಯಿತು.(23)ಶಿಶುಪಾಲನ ರಜೆಯ ಬಗ್ಗೆ ಮನವಿ ನೀಡಲಾಯಿತು. ಸಕಾರಾತ್ಮಕವಾಗಿ ಸ್ಪಂದಿಸಿದ ಸನ್ಮಾನ್ಯ ಶ್ರೀ ಕ್ಷೇತ್ರಶಿಕ್ಷಣಾಧಿಕಾರಿಗಳು ಇದರ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಮೇಲಿನ ಎಲ್ಲಾ ಅಧಿಕಾರಿಗಳಿಗೆ ನೀಡಿದ ಮನವಿಗಳನ್ನುಪೂರೈಸುತ್ತೇವೆ ಎಂದು ಸನ್ಮಾನ್ಯ ಶ್ರೀ ಶಾಸಕರು ಭರವಸೆ ನೀಡಿರುತ್ತಾರೆ ಎಂದು
ಅಧ್ಯಕ್ಷರು ಪ್ರೇಮ. ಕೆ ಹಾಗೂ ಪ್ರಧಾನ ಕಾರ್ಯದರ್ಶಿಗಳು ಅರ್ಚನಾ.ಕೆ ತಿಳಿಸಿದ್ದಾರೆ

Published by ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯಘಟಕ ಧಾರವಾಡ

ರಾಜ್ಯದ ಸರ್ಕಾರಿ,ಅನುದಾನಿತ, ಪ್ರಾಥಮಿಕ, ಪದವೀಧರ, ಹಾಗೂ ಪ್ರೌಢಶಾಲಾ ಶಿಕ್ಷಕಿಯರನ್ನೊಳಗೊಂಡ ಏಕೈಕ‌ ಸಂಘ

Leave a comment