ಶಿವಮೊಗ್ಗ ಜು.28.ಪರಿಸರಕ್ಕೆ ಯಾರು ತೋರಿಸಬೇಕು ಕನಿಕರ, ಪರಿಸರ ರಕ್ಷಿಸಿ ನಾವು ಬಾಳೋಣ ಸುಖಕರ. ಜನರಿಗಿರುವ ಆಮ್ಲಜನಕದ ಕೊರತೆ, ದೂರಮಾಡುವ ಅಹಂ ಮರೆತೆ. ಇಂದು ವಿಶ್ವ ಪರಿಸರ ಸಂರಕ್ಷಣಾ ದಿನಾಚರಣೆಯ ಅಂಗವಾಗಿ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ ಜಿಲ್ಲಾ ಘಟಕ ಶಿವಮೊಗ್ಗ ವತಿಯಿಂದ ಶಿವಮೊಗ್ಗ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಯುತ ನಾಗರಾಜ್ ರವರು ಹಾಗೂ ECO ಶ್ರೀಯುತ ಗುಡ್ಡಪ್ಪ ಗಾಣಿಗೇರ್ ಇವರ ಉಪಸ್ಥಿತಿಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ರವೀಂದ್ರ ನಗರ ಇಲ್ಲಿ ಅರಣ್ಯ ಇಲಾಖೆಯಿಂದ ವಿತರಿಸಿದ್ದ ಔಷಧೀಯ ಸಸ್ಯಗಳನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.


ಪರಿಸರವನ್ನು ಉಳಿಸುವ ಹೋರಾಟವನ್ನು ಹೊಂದಿರುವ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ ಜಿಲ್ಲಾಧ್ಯಕ್ಷರಾದ ರಾಧಾ ರವರು ಪ್ರಧಾನ ಕಾರ್ಯದರ್ಶಿಗಳಾದ ಪುಷ್ಪ ರವರು ಕೋಶಾಧ್ಯಕ್ಷರಾದ ಲಲಿತ ರವರು ಹಾಗೂ ತಾಲೂಕು ಅಧ್ಯಕ್ಷರಾದ ಶಾಹಿನ ಬಾನು ಕೋಶಾಧ್ಯಕ್ಷರಾದ ಲಕ್ಷ್ಮಿ ರವರು ಔಷಧಿ ಉಪಯುಕ್ತ ಸಸಿಗಳನ್ನು ನೆಟ್ಟು ಅವುಗಳನ್ನು ಪೋಷಿಸುವ ಉತ್ತಮ ಕಾರ್ಯದಲ್ಲಿ ತೊಡಗಿಕೊಂಡಿರುವುದನ್ನು ಕಂಡು ಮಾನ್ಯ ಕ್ಷೇತ್ರಶಿಕ್ಷಣಾಧಿಕಾರಿಗಳು ಶಿವಮೊಗ್ಗ ಇವರು ಅಭಿನಂದನೆಗಳನ್ನು ತಿಳಿಸಿ ಇನ್ನೂ ಹೆಚ್ಚು ಉತ್ತಮ ಕಾರ್ಯದಲ್ಲಿ ಪಾಲ್ಗೊಳ್ಳಿ ಎಂದು ಆಶಿಸಿದರು

