ಕೊವಿಡ್ ಲಸಿಕೆ ಕ್ಯಾಂಪ್ ನಲ್ಲಿ ಫುಲೆ ಶಿಕ್ಷಕಿಯರ ಸಂಘ ಭಾಗಿ-ಯಶಸ್ವಿ

ಕರ್ನಾಟಕ ರಾಜ್ಯ ಸಾವಿತ್ರಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ)ರಾಜ್ಯ ಘಟಕ ಧಾರವಾಡ. ರಾಯಚೂರು ಜಿಲ್ಲಾ ಘಟಕ

ರಾಯಚೂರು,june,26. ಇಂದು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜ್ ರಾಯಚೂರಿನಲ್ಲಿ ವಿಶೇಷವಾಗಿ ಶಿಕ್ಷಕರಿಗಾಗಿ ,ಉಪನ್ಯಾಸಕರಿಗಾಗಿ, ಹಾಗೂ ವಿದ್ಯಾರ್ಥಿಗಳಿಗಾಗಿ, ಉಚಿತ ಕೋವಿಡ್-19 ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಕ್ರಮಕ್ಕೆ ರಾಯಚೂರು ಜಿಲ್ಲೆಯ ಲೋಕಸಭಾ ಸದಸ್ಯರಾದ ಸನ್ಮಾನ್ಯ ಶ್ರೀ ರಾಜ ಅಮರೇಶ ನಾಯಕ, ರಾಯಚೂರು ನಗರದ ಜನಪ್ರಿಯ ಶಾಸಕರಾದ ಹಾಗೂ ಶಿಕ್ಷಕರ ಹಿತೈಷಿಗಳಾದ ಸನ್ಮಾನ್ಯ ಶ್ರೀ ಶಿವರಾಜ್ ಪಾಟೀಲ್ ಹಾಗೂ ಸನ್ಮಾನ್ಯ ಶ್ರೀ ಶಶೀಲ್. ಜಿ. ನಮೋಶಿ ವಿಧಾನ ಪರಿಷತ್ ಸದಸ್ಯರು ಈಶಾನ್ಯ ಶಿಕ್ಷಕರ ಮತಕ್ಷೇತ್ರ ಕಲ್ಬುರ್ಗಿ, ಹಾಗೂ ಸ್ಥಳೀಯ ಗಣ್ಯರು, ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳು ,ನಗರಸಭಾ ಸದಸ್ಯರು, ಅಧಿಕಾರಿಗಳು ಎಲ್ಲರೂ ಭಾಗವಹಿಸಿದ್ದರು. ಶಿಕ್ಷಣ ಇಲಾಖೆಯಿಂದ ಜಿಲ್ಲಾ ಉಪನಿರ್ದೇಶಕರಾದ ಸನ್ಮಾನ್ಯ ಶ್ರೀ ವೃಷಭೇಂದ್ರ ,ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ. ಚಂದ್ರಶೇಖರ್ ದೊಡ್ಡಮನಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಹೆಮ್ಮೆಯ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ಜಿಲ್ಲಾ ಘಟಕ ರಾಯಚೂರಿನ ಅಧ್ಯಕ್ಷರಾದ ಶ್ರೀಮತಿ. ಛಾಯಾದೇವಿ, ಪ್ರಧಾನ ಕಾರ್ಯದರ್ಶಿ ಶ್ರೀಮತಿ ಲಕ್ಷ್ಮಿ ಶಾಂತಪ್ಪ ,ಪದಾಧಿಕಾರಿಗಳಾದ ರಮಾದೇವಿ ರವರುಗಳು ಸನ್ಮಾನ್ಯ ಶ್ರೀ ಶಶೀಲ್.ಜಿ.ನಮೋಶಿ ಅವರನ್ನು ಬೇಟಿ ಮಾಡಲಾಗಿ,ಅವರೊಂದಿಗೆ ಕೆಲವು ವಿಷಯಗಳನ್ನು ಚರ್ಚಿಸಿ,ಹೊಸ ಸಿ&ಅರ್ ನಿಯಮ ತಿದ್ದುಪಡಿ ಕುರಿತು ಮತ್ತು ವರ್ಗಾವಣೆ ಪ್ರಕ್ರಿಯೆಯನ್ನು ಅತಿ ಶೀಘ್ರದಲ್ಲಿ ನಡೆಸುವಂತೆ ಮನವಿ ಮಾಡಿಕೊಂಡಿದ್ದಾರೆ.ಈ ಸಂದರ್ಭದಲ್ಲಿ ರಾಜ್ಯ ಮಹಿಳಾ ನೌಕರರಿಗಾಗಿ 6 ತಿಂಗಳು ಶಿಶುಪಾಲನಾ ರಜೆ ಮಂಜೂರು ಮಾಡಿದ ಘನ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿ ಸನ್ಮಾನಿಸಿ ಗೌರವಿಸಲಾಯಿತು.

Published by ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯಘಟಕ ಧಾರವಾಡ

ರಾಜ್ಯದ ಸರ್ಕಾರಿ,ಅನುದಾನಿತ, ಪ್ರಾಥಮಿಕ, ಪದವೀಧರ, ಹಾಗೂ ಪ್ರೌಢಶಾಲಾ ಶಿಕ್ಷಕಿಯರನ್ನೊಳಗೊಂಡ ಏಕೈಕ‌ ಸಂಘ

Leave a comment