ಶಿವಮೊಗ್ಗ ಜೂ.24.
ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ,ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ ಕೊವಿಡ್ ಸಂಕಷ್ಟದ ಈ ಸಮಯದಲ್ಲಿ ‘ಮಾನಸಿಕ ಧ್ಯಾನ ತರಬೇತಿ’ ಎಂಬ ವಿಶೇಷ ಕಾರ್ಯಕ್ರಮವನ್ನು ಗೂಗಲ್ ಮೀಟ್ ಮೂಲಕ ಕಳೆದ ಮೇ-2 ರಿಂದ ಹಮ್ಮಿಕೊಂಡಿದ್ದು,


ಶಿವಮೊಗ್ಗದ ಸಂಜೀವಿನಿ ಸ್ಪಿರಿಚ್ಯುಯಲ್ ಸಲ್ಯೂಷನ್ ನ ಸಂಮೋಹಿನಿ ತಜ್ಞೆ, ಮಾನಸಿಕ ಧ್ಯಾನ ಪ್ರಚಾರಕಿ.ಅಧ್ಯಾತ್ಮ ಚಿಂತಕಿ ಶ್ರೀಲಕ್ಷ್ಮಿ ರವರು ಧ್ಯಾನ ತರಬೇತಿಯನ್ನು ಬಹಳ ಉತ್ಸಾಹದಿಂದ ನಡೆಸಿಕೊಡುತ್ತಿದ್ದಾರೆ, ಅವರು ಮಾತನಾಡಿ ಧ್ಯಾನ ಒಂದು ಪರಮಾನಂದಕರವಾದ ಅನುಭವ, ಇದು ನಮ್ಮ ಎಲ್ಲಾ ನೋವು, ಸಂಕಟ, ಬಂಧನಗಳಿಂದ ಬಿಡಿಸುತ್ತದೆ. ಧ್ಯಾನದಿಂದ ನಮ್ಮ ಕಾರ್ಯದಕ್ಷತೆ, ನೈಪುಣ್ಯತೆ ಉತ್ತುಂಗ ಮಟ್ಟಕ್ಕೇರುತ್ತದೆ ಎಂದಿದ್ದಾರೆ,

ಶಿವಮೊಗ್ಗ ಜಿಲ್ಲಾಧ್ಯಕ್ಷರಾದ ಶ್ರೀಮತಿ ರಾಧಾ ರವರು
ಶಿಕ್ಷಕಿಯರು ಇಂಥ ಮಹಾಮಾರಿ ಕಾಯಿಲೆ ಮಧ್ಯದಲ್ಲಿ ಆತ್ಮವಿಶ್ವಾಸದಿಂದ ಮುನ್ನುಗ್ಗಿ ತಮ್ಮ ಕೆಲಸಕಾರ್ಯಗಳ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುವಂತೆ ಆರೋಗ್ಯಕರ ವಾತಾವರಣವನ್ನು ಈ ಧ್ಯಾನದಿಂದ ಸೃಷ್ಟಿಸಬಹುದಾಗಿದೆ,ಇದು ನಮ್ಮೆಲ್ಲರಿಗೂ ಇಂತಹ ಕೊವಿಡ್ ಭಯಾನಕ ಪರಿಸ್ಥಿತಿಯಲ್ಲಿ ಉತ್ತಮ ಕಾರ್ಯಕ್ರಮ ಆಗಿದ್ದು.ಎಲ್ಲರಿಗೂ ಪ್ರಯೋಜನವಾಗಿದೆ ಎಂದಿದ್ದಾರೆ.
ಧ್ಯಾನ ತರಬೇತಿಯು ಒಟ್ಟು 21 ದಿನಗಳ ಕಾಲ ಹಮ್ಮಿಕೊಂಡಿದ್ದೆವು,ಪ್ರತಿ ದಿನ ಸುಮಾರು 60-90 ಜನ ಧ್ಯಾನ ಆಸಕ್ತರು ಭಾಗವಹಿಸುತ್ತಿದ್ದರು. ಇದರ ಸದ್ಬಳಕೆ ಮಾಡಿಕೊಳ್ಳುವ ಆಸಕ್ತರು ಇನ್ನೂ ಹೆಚ್ಚು ದಿನಗಳ ಕಾಲ ತರಬೇತಿ ಪಡೆಯಲು ಬಯಸಿ ಬೇಡಿಕೆ ಇಟ್ಟ ಕಾರಣ ಇಂದಿಗೆ 42 ದಿನಗಳಾದರೂ ಇಲ್ಲಿಯವರೆಗೂ ಸಹಾ ಧ್ಯಾನ ತರಬೇತಿಯನ್ನು ನಡೆಸಲಾಗುತ್ತಿದೆ. ಇದರಿಂದ ಉತ್ತಮವಾದ ಆರೋಗ್ಯ ಲಭಿಸುತ್ತಿರುವುದು ಈ ಧ್ಯಾನದ ಮಹಿಮೆ ಎನ್ನಬಹುದು ಎಂದು ಜಿಲ್ಲಾ ಕಾರ್ಯದರ್ಶಿ ಯಾದ ಶ್ರೀಮತಿ ಪುಷ್ಪಾ ನರೇಗೌಡರ್ ಅಭಿಪ್ರಾಯ ಪಟ್ಟಿದ್ದಾರೆ.

ಇಂಥ ಅತ್ಯುತ್ತಮವಾದ ತರಬೇತಿಯನ್ನು ನಡೆಸಿಕೊಡುತ್ತಿರುವ ಆಧ್ಯಾತ್ಮ ಚಿಂತಕರಾದ ಶ್ರೀಲಕ್ಷ್ಮಿಯವರಿಗೆ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಸಂಘ,ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷರಾದ ರಾಧಾ ರವರು, ಪ್ರಧಾನ ಕಾರ್ಯದರ್ಶಿಗಳಾದ ಪುಷ್ಪ ನರೇಗೌಡರ್, ಕೋಶಾಧ್ಯಕ್ಷರಾದ ಲಲಿತ, ಹಾಗೂ ತಾಲೂಕು ಘಟಕ ಶಿವಮೊಗ್ಗ ಅಧ್ಯಕ್ಷರಾದ ಶಾಹಿನ ಬಾನು, ಕೋಶಾಧ್ಯಕ್ಷರಾದ ಲಕ್ಷ್ಮಿ ರವರುಗಳು ಎಲ್ಲಾ ಶಿವಮೊಗ್ಗ ಜಿಲ್ಲಾ ಎಲ್ಲಾ ತಾಲ್ಲೂಕು ಎಲ್ಲಾ ಪದಾಧಿಕಾರಿಗಳು.ಶಿಕ್ಷಕ ಶಿಕ್ಷಕಿಯರ ಪರವಾಗಿ ಅನಂತ ಅನಂತ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
