
ಶಿವಮೊಗ್ಗ ಜೂ21.
ಬರಡಾದ ನೆಲಕ್ಕೆ ಜೀವಚೈತನ್ಯ ತಲುಪಿಸುವ ಹೊಣೆ ಹೊತ್ತು, ಸದ್ದಿಲ್ಲದೆ ಚಿಗುರೊಡೆದು ಬಂದ ಫುಲೆ ಸಂಘವು ಪ್ರಕೃತಿ ಯಂತೆ ಶುದ್ಧ. ವನಸಿರಿಯ ಪ್ರೀತಿಯಂತೆ ಅದಕ್ಕೆ ಪರ್ಯಾಯ ಪದ ಇಲ್ಲವೆನ್ನುವಷ್ಟು ಪರಿಶುದ್ಧ ಎಂಬ ನುಡಿಯಂತೆ ಇಂದು ಕರ್ನಾಟಕ ರಾಜ್ಯ ಸಾವಿತ್ರಿ ಬಾಯಿ ಪುಲೆ ಶಿಕ್ಷಕಿಯರ ಸಂಘವು, ಶಿವಮೊಗ್ಗದ ವಲಯ ಅರಣ್ಯಾಧಿಕಾರಿ ಶ್ರೀ ಉಮೇಶ್ ರವರಿಗೆ ಔಷಧಿಯುಕ್ತ ಹಾಗೂ ಉಪಯುಕ್ತ ಸಸಿಗಳನ್ನು ನೀಡುವಂತೆ ಮನವಿ ಮಾಡಿದೆ.ವಲಯ ಅರಣ್ಯಾಧಿಕಾರಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿ ಉತ್ತಮ ಕೆಲಸದಲ್ಲಿ ಫುಲೆ ಶಿಕ್ಷಕಿಯರ ಸಂಘ ತೊಡಗಿಸಿಕೊಂಡಿದೆ ಹೀಗೇ ಮುಂದೆಯು ಪರಿಸರ ಪ್ರೇಮ ಪರಿಸರ ಪ್ರಜ್ಞೆ ಎಲ್ಲರಲಿ ಮೂಡಿಸುವಂತ ಕಾರ್ಯಕ್ರಮಗಳನ್ನು ಫುಲೆ ಸಂಘವು ಹಮ್ಮಿಕೊಳ್ಳಲು ನಮ್ಮ ಸಹಕಾರ ಎಂದಿಗೂ ಸಿಗುತ್ತದೆ ಎಂದು ಭರವಸೆ ನೀಡಿದ್ದು,ಈ ಸಸಿಗಳನ್ನು
ರವೀಂದ್ರ ನಗರದ ಸರ್ಕಾರಿ ಶಾಲೆಯ ಆವರಣದಲ್ಲಿ ನೆಟ್ಟು ಬೆಳೆಸಿ ಪೋಷಿಸುವ ಸಂಪೂರ್ಣ ಜವಾಬ್ದಾರಿಯನ್ನು ನಮ್ಮ ಸಂಘಟನೆ ಹೊರಲಿದೆ ಎಂದು ಜಿಲ್ಲಾಧ್ಯಕ್ಷರಾದ ರಾಧಾ ರವರು ತಿಳಿಸಿದ್ದಾರೆ..
ಪ್ರಧಾನ ಕಾರ್ಯದರ್ಶಿಗಳಾದ ಪುಷ್ಪ ನರಗುಂದ ಹಾಗೂ ಜಿಲ್ಲಾ ಕೋಶಾಧ್ಯಕ್ಷರಾದ ಲಲಿತ ರವರು,ತಾಲೂಕಿನ ಅಧ್ಯಕ್ಷರಾದ ಶಾಹಿನ ಬಾನು,ತಾಲ್ಲೂಕಿನ ಕೋಶಾದಕ್ಷರಾದ ಲಕ್ಷ್ಮಿ ರವರುಗಳು ಸಂಘದ ಎಲ್ಲಾ ಪದಾಧಿಕಾರಿಗಳು ಪರವಾಗಿ ಭಾಗವಹಿಸಿ ಮನವಿ ಮಾಡಿಕೊಂಡಿದ್ದಾರೆ.

