ಧಾರವಾಡ ಜೂನ್ 18.
ಶಿಶುಪಾಲನೆ ರಜೆ ಕುರಿತ ಸರ್ಕಾರದ ಆದೇಶ ಮಾಡಲು ಮನವಿ ಸಲ್ಲಿಸಿದ ರಾಜ್ಯ ಫುಲೆ ಸಂಘ
2021-22ನೇ ಸಾಲಿನ ರಾಜ್ಯ ಬಜೆಟ್ ನಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳು ರಾಜ್ಯದ ಮಹಿಳಾ ಸರ್ಕಾರಿ ನೌಕರರಿಗೆ ೬ ತಿಂಗಳ ಶಿಶುಪಾಲನಾ ರಜೆಯನ್ನು ಘೋಷಣೆ ಮಾಡಿದ್ದು,
ಇದು ಮಹಿಳಾ ನೌಕರರ ಮತ್ತು ಶಿಕ್ಷಕಿಯರ ಪರವಾಗಿ ಸನ್ಮಾನ್ಯ ಮುಖ್ಯಮಂತ್ರಿಗಳಿಗಿರುವ ಕಾಳಜಿಯನ್ನು ತೋರಿಸುತ್ತದೆ.

ಇದು ರಾಜ್ಯದ ಎಲ್ಲಾ ಮಹಿಳಾ ಸರ್ಕಾರಿ ನೌಕರರು ಮತ್ತು ಮಹಿಳಾ ಶಿಕ಼ಕಿಯರಿಗೆ ಇದು ಅತ್ಯಂತ ಹೆಮ್ಮೆಯ ವಿಷಯವಾಗಿದೆ.
ಈ ಹಿನ್ನೆಲೆಯಲ್ಲಿ ಮಾನ್ಯ ಮುಖ್ಯಮಂತ್ರಿಗಳಿಗೆ ರಾಜ್ಯದ ಸರ್ವ ಮಹಿಳಾ ಶಿಕ್ಷಕಿಯರೆಲ್ಲರೂ ಅಭಾರಿಯಾಗಿದ್ದೇವೆ ಎಂದು ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಲತಾ.ಎಸ್.ಮುಳ್ಳೂರವರು ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಅತೀ ಶೀಘ್ರದಲ್ಲಿ ರಾಜ್ಯ ಮಹಿಳಾ ನೌಕರರಿಗೆ ‘೬ ತಿಂಗಳ ಶಿಶುಪಾಲನಾ ರಜೆ’ ಯ ಸರ್ಕಾರಿ ಆದೇಶವನ್ನು ಮಾಡಿಕೊಡುವಂತೆ ಘನ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳವರಿಗೆ ಹಾಗೂ
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳವರಿಗೆ
ಡಾ. ಲತಾ. ಎಸ್. ಮುಳ್ಳೂರ ಹಾಗೂ
ರಾಜ್ಯ ಪ್ರಧಾನ ಕಾರ್ಯದರ್ಶಿ
ಶ್ರೀಮತಿ ಜ್ಯೋತಿ. H ರವರುಗಳು ಮನವಿ ಮಾಡಿದ್ದಾರೆ. ಹಾಗೆಯೇ
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಅಭಿವೃದ್ಧಿ ಆಯುಕ್ತರು, ವಿಧಾನಸೌಧ, ಬೆಂಗಳೂರು ಹಾಗೂ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು (ಆರ್ಥಿಕ ಇಲಾಖೆ), ವಿಧಾನಸೌಧ, ಬೆಂಗಳೂರು ಇವರುಗಳಿಗೂ ಸಹ ಮನವಿ ಪ್ರತಿಗಳನ್ನು ಸಲ್ಲಿಸಿದ್ದಾರೆ.



