ಮಧುಗಿರಿ. ಜೂ.10.
ಸರಳ ಸಜ್ಜನಿಕೆಯ ಕ್ರಿಯಾಶೀಲರು, ಶಿಕ್ಷಣ ಆಸಕ್ತರು, ಸದಾ ಶೈಕ್ಷಣಿಕ ಚಟುವಟಿಕೆಯಲ್ಲಿ ಜೀವನವನ್ನು ತೊಡಗಿಸಿಕೊಂಡವರು,ಮಕ್ಕಳ ಕಲಿಕೆಗಾಗಿ ಸದಾ ಚಿಂತನೆ ಮಾಡುವವರು ಮಧುಗಿರಿ ಶೈ. ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಮಾನ್ಯ ಉಪನಿರ್ದೇಶಕರು ಶ್ರೀ ಎಂ ರೇವಣ್ಣಸಿದ್ದಪ್ಪನವರು.


ಕೊವಿಡ್ ಎರಡನೇ ಅಲೆಗೆ ಸಿಕ್ಕಿ ಹಲವಾರು ಶಿಕ್ಷಕರು ತಮ್ಮ ಜೀವವನ್ನೆ ಕಳೆದುಕೊಂಡಾಗ ಮರುಗಿ, ಅಂತಹ ಸಂಕಷ್ಟದ ದುಸ್ಥಿತಿಯಲ್ಲೂ ವಿವಿಧ ವರ್ಚ್ಯುಯಲ್ ವೆಬಿನಾರ್ ಕಾರ್ಯಕ್ರಮಗಳನ್ನು ಎಲ್ಲಾ ತಾಲ್ಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಾರಥ್ಯದಲ್ಲಿ ಹಮ್ಮಿಕೊಂಡು ಜಿಲ್ಲೆಯ ಎಲ್ಲಾ ಶಿಕ್ಷಕರಿಗೆ ಮತ್ತು ಅವರ ಕುಟುಂಬದವರಿಗೆ ಆತ್ಮಸ್ಥೈರ್ಯ ಮೂಡಿಸಿದರು, ಎಲ್ಲರಿಗೂ ಧೈರ್ಯ ತುಂಬುವ ಮೂಲಕ ಪ್ರತೀ ಶಿಕ್ಷಕರ ಪ್ರೀತಿಗೆ ಪಾತ್ರರಾದವರು, ಸರಳ ಸೌಮ್ಯ ಸ್ವಭಾವ,ಸ್ಪಂದನೆ,ಸಹಕಾರಗಳಿಂದ ಇವರು ಶಿಕ್ಷಕರ ಸ್ನೇಹಿಯಾಗಿ.ದಕ್ಷ ಪ್ರಾಮಾಣಿಕ ಅಧಿಕಾರಿಯಾಗಿ ಶಿಕ್ಷಕರ ಆಶಾಕಿರಣವಾಗಿ ಹೆಮ್ಮೆಯ ಜಿಲ್ಲಾ ಉಪ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ಎಂ. ರೇವಣ್ಣ ಸಿದ್ದಪ್ಪ ರವರ ಜನ್ಮ ದಿನ ಇಂದು,


ಅವರಿಗೆ ಪ್ರೀತಿಪೂರ್ವಕವಾಗಿ ಶುಭಕೋರುವ ಮೂಲಕ ಅವರಿಗೆ ಆ ದೇವರು ಆರೋಗ್ಯ ಐಶ್ವರ್ಯ,ಸಂಪತ್ತನ್ನು ನೀಡಲಿ, ಹೆಚ್ಚು ಹೆಚ್ಚು ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಉನ್ನತ ಮಟ್ಟದಲ್ಲಿ ಅವರಿಗೆ ಕೀರ್ತಿ ಲಬಿಸಲಿ ಎಂದು ನಮ್ಮ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘವು ಪ್ರಾರ್ಥಿಸಿ ಆಶಿಸುತ್ತಾ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಪದಾಧಿಕಾರಿಗಳ ಪರವಾಗಿ, ಹಾಗೂ ಪ್ರಾಥಮಿಕ ಪ್ರೌಢಶಾಲೆಯ ಸಮಸ್ತ ಶಿಕ್ಷಕಿಯರ ಪರವಾಗಿ ಜಿಲ್ಲಾಧ್ಯಕ್ಷರಾದ ಶ್ರೀಮತಿ ಜಿ.ಎಲ್.ರಾಧಮ್ಮ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಲತಾಮಣಿ. ಹೆಚ್.ಕೆ ರವರು ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.
