
ಧಾರವಾಡ,ಜೂನ್ 8
ಈ ಕೊವಿಡ್ ಸಂಕಷ್ಟ ದಿನಗಳಲ್ಲಿ ಹಲವಾರು ಸವಾಲುಗಳು ಇರುವಂತ ಈ ಸಮಯದಲ್ಲಿ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ 2021-22ನೇ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಬಿಸಲು ಈಗಾಗಲೇ ಶಿಕ್ಷಣ ಇಲಾಖೆ ಸೂಚನೆ ನೀಡಿರುವುದನ್ನು ಸ್ವಾಗತ ಮಾಡುತ್ತೇವೆ.
ಬೇಸಿಗೆ ರಜೆ ಮೇಲೆ ತಮ್ಮ ತಮ್ಮ ಸ್ವಂತ ಜಿಲ್ಲೆಗಳಿಗೆ ತೆರೆಳಿದ್ದ ಎಲ್ಲಾ ಶಿಕ್ಷಕ ಶಿಕ್ಷಕಿಯರು
ಜೂನ್ 15 ರಿಂದ ಶಾಲೆಗೆ ಹಾಜರಾಗಿ ಮಕ್ಕಳ ಶಾಲಾ ದಾಖಲಾತಿ ಪ್ರಾರಂಬಿಸಿಕೊಳ್ಳಲು ಶಾಲೆಗಳಿಗೆ ಮರಳಲೂ ಕೂಡ ತಿಳಿಸಲಾಗಿದೆ

ಕೊವಿಡ್ ಎರಡನೇ ಅಲೆಯು ನಗರ ಪ್ರದೇಶಗಳಿಗಿಂತ ಹಳ್ಳೀ ಪ್ರದೇಶಗಳಲ್ಲಿಯೇ ಬಾರಿ ಸಂಚಲನ ಉಂಟು ಮಾಡಿರುವುದು ಎಲ್ಲರಿಗೂ ತಿಳಿದಿದೆ..ಈಗಾಗಲೇ ನೂರಾರು ಶಿಕ್ಷಕ-ಶಿಕ್ಷಕಿಯರ ಪ್ರಾಣ ಬಲಿಯಾಗಿದೆ, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಶಾಲೆಗಳಿಗೆ ತೆರಳಿ ಕರ್ತವ್ಯ ಪ್ರಾರಂಬಿಸುವುದು ಶಿಕ್ಷಕರುಗಳಿಗೆ ಸವಾಲಾಗಿ ಪರಿಣಮಿಸಿದೆ. ಆದ್ದರಿಂದ ಘನ ಸರ್ಕಾರವು ಶಾಲೆಗೆ ಮರಳುವ ಮುನ್ನ ಪ್ರತೀ ಶಿಕ್ಷಕರುಗಳಿಗೆ ಸೂಕ್ತ ಸೌಕರ್ಯಗಳನ್ನು ಒದಗಿಸಿಬೇಕಾಗಿದೆ, ಅವರಿಗೆ ಶಾಲೆಗೆ ಮರಳುವ ಮುನ್ನವೇ ಮೊದಲ ಸಾಲಿನಲ್ಲಿ ಕೊವಿಡ್ ಲಸಿಕೆ ನೀಡಬೇಕು,ಶಾಲೆಗೆ ಸ್ವಚ್ಚತೆಯ ಜೊತೆಯಲ್ಲಿ ಸಂಪೂರ್ಣ ಸಾನಿಟೈಸರ್ ಮಾಡಿಸಬೇಕು,
ಪ್ರತಿದಿನ ಬಳಸಲು ಸಾನಿಟೈಸರ್ ಬಾಟಲ್ಸ್, ಮಾಸ್ಕ್ ಗಳನ್ನು ಪ್ರತೀ ಶಾಲೆಗೆ ವಿತರಿಸಬೇಕು.ಎಲ್ಲದಕ್ಕು ಮೊದಲಾಗಿ, ಲಾಕ್ ಡೌನ್ ವಿಸ್ತರಣೆಯಿಂದ ಬಸ್ ಸಂಚಾರ ನಿರ್ಬಂದ ಹೇರಿರುವುದರಿಂದ ಬೇಸಿಗೆ ರಜೆ ಇದ್ದ ಕಾರಣಕ್ಕೆಪ್ರಸ್ತುತ ದಿನದಲ್ಲಿ ತಮ್ಮ ಸ್ವಂತ ಜಿಲ್ಲೆಗಳಲ್ಲಿರುವ ಸಾವಿರಾರು ಶಿಕ್ಷಕರು ಇಂದು ವಿವಿದ ಜಿಲ್ಲೆಗಳಿಂದ ಶಾಲೆಗಳತ್ತ ತೆರಳಲು ಸಾದ್ಯವಿಲ್ಲ, ಆದ ಕಾರಣ ಜೂನ್ 15 ರ ಒಳಗಾಗಿ ಕೂಡಲೇ ಬಸ್ ಸಂಚಾರ ಪ್ರಾರಂಬಿಸಬೇಕಾಗಿದೆ. ಇದೆಲ್ಲ ಸರ್ಕಾರವಾಗಲಿ ,ಶಿಕ್ಷಣ ಇಲಾಖೆಯಾಗಲಿ ಕೂಡಲೇ ಗಮನ ಹರಿಸಿ ಎಲ್ಲಾ ಸೌಕರ್ಯಗಳನ್ನು ಒದಗಿಸಿದಾಗ ಮಾತ್ರ ಸಕಾಲದಲ್ಲಿ ಶಾಲೆಗೆ ತೆರಳಿ ಕರ್ತವ್ಯಕ್ಕೆ ಹಾಜರಾಗಲು ಸಾದ್ಯವಿದೆ. ಇದರಿಂದ ಎಲ್ಲಾ ಶಿಕ್ಷಕರಿಗು ಅನುಕೂಲವಾಗುತ್ತದೆ.ಎಂದು ಕರ್ನಾಟಕ ರಾಜ್ಯ ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಲತಾ.ಎಸ್.ಮುಳ್ಳೂರ ರವರು ಸಮಸ್ತ ಶಿಕ್ಷಕ- ಶಿಕ್ಷಕಿಯರ ಪರವಾಗಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

