ಶಿವಮೊಗ್ಗ ಜೂನ್ 3.
*ಇಂದು ನಮ್ಮ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಸಂಘ(ರಿ)ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ ಖಾಸಗಿ ಶಾಲಾ ಶಿಕ್ಷಕಿಯೊಬ್ಬರಿಗೆ 10,000₹ (ಹತ್ತು ಸಾವಿರ)ರೂಗಳನ್ನು ಧನಸಹಾಯವಾಗಿ ನೀಡಲಾಯಿತು..*

*ಖಾಸಗಿ ಶಾಲಾ ಶಿಕ್ಷಕಿಯವರು ಒಂದುಕಡೆ ಕೋವಿಡ್19 ಕ್ಕೆ ಸಿಲುಕಿ ಇತ್ತೀಚೆಗಷ್ಟೆ ಚೇತರಿಸಿಕೊಳ್ಳುತ್ತಿದ್ದರೆ ಮತ್ತೊಂದು ಕಡೆ ಅವರ ಪತಿಯವರು ಕೋವಿಡ್ ನಿಂದ ಆಸ್ಪತ್ರೆಗೆ ಸೇರಿದ್ದಾರೆ. ಅವರಿಗೆ ತುರ್ತು ಹಣದ ಅಗತ್ಯವಿದೆ ಎಂದು ನಮ್ಮ ಮಾನ್ಯ ಶಿಕ್ಷಣಾಧಿಕಾರಿಗಳಿಂದ ಗಮನಕ್ಕೆ ಬಂದ ಕೂಡಲೇ ನಮ್ಮ ಸಂಘವು ಎಚ್ಚೆತ್ತುಕೊಂಡು ಈ ಒಂದು ಸಣ್ಣ ಅಳಿಲು ಸೇವೆಯನ್ನು ಮಾಡಲು ನಮ್ಮ ಸಂಘದ ಸದಸ್ಯರು ಎಲ್ಲರೂ ನಿರ್ಧರಿಸಿ ಇಂದು ಧನಸಹಾಯಕ್ಕೆ ಮುಂದಾದೆವು ಎಂದು ಜಿಲ್ಲಾಧ್ಯಕ್ಷರಾದ ಶ್ರೀಮತಿ ರಾಧಾ ರವರು ತಿಳಿಸಿದ್ದಾರೆ*
*ನಮ್ಮ ಈ ಸೇವಾಕಾರ್ಯಕ್ಕೆ ಶ್ಲಾಘಿಸಿದ ಮಾನ್ಯ ಶಿಕ್ಷಣಾಧಿಕಾರಿಗಳಾದ ಶ್ರೀ.ನಾಗರಾಜ್ ಸರ್ ಅವರಿಗೂ*ಹಾಗೂ ಈ ಕಾರ್ಯಕ್ಕೆ ಧನ ಸಹಾಯ ಮಾಡಿದ ಎಲ್ಲಾ ಪದಾಧಿಕಾರಿಗಳು, ಶಿಕ್ಷಕಿ ಮಿತ್ರರಿಗೆ ಹಾಗೂ ಇನ್ನಿತರ ಬಂಧುಗಳಿಗೆ ನಮ್ಮ ಸಂಘದ ವತಿಯಿಂದ ಧನ್ಯವಾದಗಳನ್ನು ಸಹಾ ಅರ್ಪಿಸಿದ್ದಾರೆ*ಈ ಸುಸಂದರ್ಭದಲ್ಲಿ ಶ್ರೀಮತಿ.ರಾಧಾ,ಜಿಲ್ಲಾಧ್ಯಕ್ಷರು, ಶ್ರೀಮತಿ. ಅನಿತ ಜಿಲ್ಲಾ ಉಪಾಧ್ಯಕ್ಷರು,ಶ್ರೀಮತಿ. ಶಾಹಿನ್ ಬಾನು,ತಾಲೂಕು ಅಧ್ಯಕ್ಷರು,ಶ್ರೀಮತಿ.ಶರಾವತಿ,ತಾಲೂಕು ಪ್ರಧಾನಕಾರ್ಯಾದರ್ಶಿಗಳು ಬಾಗವಹಿಸಿದ್ದರು*
