ಉನ್ನತ ವಿದ್ಯಾರ್ಹತೆಯುಳ್ಳ,ಸುದೀರ್ಘ ಸೇವಾ ಅನುಭವವುಳ್ಳ ಕಾರ್ಯನಿರತ ಶಿಕ್ಷಕರಿಗೆ ನ್ಯಾಯ ಸಿಗಲಿ- ಮುಳ್ಳೂರ ಅಭಿಪ್ರಾಯ

ಧಾರವಾಡ ಮೇ30*  ಹೊಸ ಸಿ ಅಂಡ್ ರೂಲ್ ಬಂದಾಗಿನಿಂದಲೂ ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕದಲ್ಲಾಗಲಿ ಅಥವಾ ಅವರುಗೆ ಬಡ್ತಿ ನೀಡುವ ವಿಚಾರದಲ್ಲಾಗಲಿ, ಹಾಲಿ ಕೆಲಸ ನಿರ್ವಹಿಸುತ್ತಿರುವ ಸರ್ಕಾರಿ ಶಿಕ್ಷಕ ಶಿಕ್ಷಕಿಯರಿಗೆ ಮೇಲಿಂದ ಮೇಲೆ  ಹಲವಾರು ಸಮಸ್ಯೆಗಳು  ಎದುರಾಗುತ್ತಲೇ ಇವೆ.
ಹೌದು ಇಲ್ಲಿಯವರೆಗೆ  1-7 ನೇ ತರಗತಿ ಬೋದನೆಗಾಗಿ ನೇಮಕವಾದ ಶಿಕ್ಷಕರನ್ನು ಇಂದು 1-5 ನೇ ತರಗತಿಗೆ ಸೀಮಿತಗೊಳಿಸಿರುವುದು, 6-8 ನೇ ತರಗತಿಗೆ ಪದವಿ ಮಾಡಿದವರನ್ನು ನೇರವಾಗಿ ನೇಮಕಾತಿ ಮಾಡಿರುವುದು ,ಪ್ರಸ್ತುತ ಕಾರ್ಯ ನಿರತ ಶಿಕ್ಷಕರುಗಳ ಉನ್ನತ ವಿದ್ಯಾರ್ಹತೆಗೆ ಹಾಗೂ ಅವರು ಸಲ್ಲಿಸುವ ದೀರ್ಘ ಸೇವಾವಧಿಯ ಅನುಭವಕ್ಕೆ ಕಿಂಚಿತ್ತು ಮಾನ್ಯತೆ ಇಲ್ಲದಂತಾಗಿದೆ. ಇಂದು ಅವರನ್ನು 1-5 ನೇ ತರಗತಿಗೆ ಮಾತ್ರ ಸೀಮಿತಗೊಳಿಸಿರುವುದು ಹಿಂಬಡ್ತಿ ನೀಡಿದಂತೆ ಮಾಡಲಾಗಿದೆ. ಇದು ರಾಜ್ಯದ ಎಲ್ಲಾ ಶಿಕ್ಷಕರಿಗೂ ಅಸಮಾದಾನವನ್ನುಂಟು ಮಾಡಿದೆ. ಸರ್ಕಾರಕ್ಕೆ ಹಲವಾರು ಬಾರಿ ಈ ವಿಷಯವಾಗಿ ಸಿ ಅಂಡ್ ಆರ್ ನಿಯಮ ತಿದ್ದುಪಡಿ ಮಾಡಿ ಕಾರ್ಯನಿರತ ಶಿಕ್ಷಕರು ಗಳಿಸಿರುವ ಉನ್ನತ ಪದವಿ ವಿದ್ಯಾರ್ಹತೆಯನ್ನು ಪರಿಗಣಿಸಿ ಮೊದಲು ಅವರನ್ನು 6-8 ನೇ ತರಗತಿ ಬೋದಕರೆಂದು ವಿಲೀನ ಮಾಡಿ ನಂತರದಲ್ಲಿ ಉಳಿದ ಖಾಲಿ ಹುದ್ದೆಗಳಿಗೆ ಹೊಸ ನೇಮಕಾತಿ ಮಾಡಿ ಎಂದು ಮನವಿ ಸಲ್ಲಿಸಿದ್ದು,ಸರ್ಕಾರವು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ   ಭರವಸೆ ನೀಡಿತ್ತಾದರೂ ಮುಂದುವರೆದು  ಶಿಕ್ಷಕರ ಬಡ್ತಿ ವಿಚಾರದಲ್ಲಿಯೂ ಸಮಸ್ಯೆಯುಂಟಾಗಿದೆ. ಹಿಂದಿನಿಂದಲೂ 1-7 ನೇ ತರಗತಿ ಬೋದಿಸುತ್ತಿದ್ದ ಶಿಕ್ಷಕರನ್ನು ಇಲಾಖೆಯು ಅವರ ವಿದ್ಯಾರ್ಹತೆ ಪರಿಗಣಿಸಿ  8-10 ತರಗತಿ ಪ್ರೌಢಶಾಲೆಗೆ  ಬಡ್ತಿ ನೀಡುವ ಪ್ರಕ್ರಿಯೆ ನಡೆಸುತ್ತಲೇ  ಬಂದಿತ್ತು‌..ಅದೇ ರೀತಿ ಕಳೆದ ವರ್ಷದಲ್ಲು ಹಲವಾರು ಶಿಕ್ಷಕರಿಗೆ  ಬಡ್ತಿ ಬಾಗ್ಯ ಲಭಿಸಿತ್ತು.. ಇದನ್ನು ಪ್ರಶ್ನಿಸಿ ಪಧವೀಧರ(6-8) ಶಿಕ್ಷಕರು ನ್ಯಾಯಾಲಯದ ಮೊರೆ ಹೋಗಿದ್ದರ ಪರಿಣಾಮ ಪ್ರಸ್ತುತ ಜಾರಿಯಲ್ಲಿದ್ದ ಸಿ ಅಂಡ್ ಆರ್ ನಿಯಮವನ್ನು ಎತ್ತಿಹಿಡಿದು ಇಂದು ಪ್ರಾಥಮಿಕ ಶಾಲಾ ಶಿಕ್ಷಕರು  8-10 ನೇ ತರಗತಿಗೆ ಬಡ್ತಿ ಹೊಂದಲು ಅನರ್ಹರು ಹಾಗೂ ಈಗಾಗಲೆ  ಬಡ್ತಿ ಹೊಂದಿದ್ದ ಸುಮಾರು 8000 ಶಿಕ್ಷಕರಿಗೆ ಹಿಂಬಡ್ತಿ ನೀಡಲು ಘನ ನ್ಯಾಯಾಲಯ ತೀರ್ಪು ನೀಡಿದೆ. ಎಲ್ಲಾ ಕಾರ್ಯನಿರತ ಶಿಕ್ಷಕರಿಗೆ ಈ ತೀರ್ಪಿನಿಂದ ಆಘಾತವಾಗಿದೆ.ಇದರ ಜೊತೆಗೆ ಮನ ನೋವಾಗಿದೆ ಅವರ ಉನ್ನತ ವಿದ್ಯಾರ್ಹತೆ ಹಾಗೂ ಅವರ ಸುದೀರ್ಘ ಸೇವಾ ಅನುಭವಕ್ಕೆ ಬೆಲೆಯೇ ಇಲ್ಲದಂತಾಗಿದೆ,
ಈ ಸಂಬಂಧ ಘನ ಸರ್ಕಾರವು ಗಮನಾರ್ಹವಾಗಿ ಪರಿಗಣಿಸಿ ಘನ ನ್ಯಾಯಾಲಯಕ್ಕೆ ಮರುಪರಿಶೀಲಿಸುವಂತೆ ಕೋರಿ ಮನವಿ ಸಲ್ಲಿಸುವಂತೆ ಹಾಗೂ ಮುಂದೆಯೂ ಇಂತ ಸಮಸ್ಯೆಗಳು ಶಿಕ್ಷಕರಿಗೆ ಬಾರದಂತೆ,ಶಿಕ್ಷಕರ ಉನ್ನತ  ವಿದ್ಯಾರ್ಹತೆಗೆ ಹಾಗೂ ಅವರು ಸಲ್ಲಿಸುತ್ತಿರುವ ಸುದೀರ್ಘ ಸೇವಾ ಅನುಭವಕ್ಕೆ ಸೂಕ್ತ ನ್ಯಾಯ ಒದಗಿಸಲು ಸಿ ಅಂಡ್ ಆರ್ ನಿಯಮವನ್ನು ತಿದ್ದುಪಡಿ ಮಾಡಿ ಅನುಕೂಲ ಮಾಡಿಕೊಡುವಂತೆ ನಮ್ಮ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ಮನವಿಯನ್ನು ಮಾಡಿದೆ.

Published by ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯಘಟಕ ಧಾರವಾಡ

ರಾಜ್ಯದ ಸರ್ಕಾರಿ,ಅನುದಾನಿತ, ಪ್ರಾಥಮಿಕ, ಪದವೀಧರ, ಹಾಗೂ ಪ್ರೌಢಶಾಲಾ ಶಿಕ್ಷಕಿಯರನ್ನೊಳಗೊಂಡ ಏಕೈಕ‌ ಸಂಘ

Leave a comment