
ಶಿವಮೊಗ್ಗ ಮೇ.28 ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯಘಟಕ- ಧಾರವಾಡ. ಶಿವಮೊಗ್ಗ ಘಟಕದ ವತಿಯಿಂದ ಕೊವಿಡ್ ಕರ್ತವ್ಯ ನಿರ್ವಹಿಸುತ್ತಿರುವ ವಾರಿಯರ್ ಶಿಕ್ಷಕರಿಗಷ್ಟೆ ಅಲ್ಲದೇ ಪ್ರತೀ ಶಿಕ್ಷಕರುಗಳಿಗೂ ಕೊವಿಡ್ ಲಸಿಕೆ ಹಾಕಿಸಲು ಕೋರಿ ಇಂದು ಶಿವಮೊಗ್ಗ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಮನವಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಾನ್ಯ ನಾಗರಾಜ್ ಪಿ.ರವರು ಸಕಾರಾತ್ಮಕವಾಗಿ ಸ್ಪಂದಿಸಿರುತ್ತಾರೆ ಎಂದು ಶಿವಮೊಗ್ಗ ಜಿಲ್ಲಾಧ್ಯಕ್ಷರಾದ ಶ್ರೀಮತಿ ರಾಧಾ ರವರು ತಿಳಿಸಿದ್ದಾರೆ. ಉಪಾಧ್ಯಕ್ಷರಾದ ಶ್ರೀಮತಿ ಅನಿತ ಕೃಷ್ಣ, ತಾಲ್ಲೂಕು ಅಧ್ಯಕ್ಷರಾದ ಶ್ರೀಮತಿ ಶಾಯಿನ್ ಬಾನು ಹಾಗು ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.
