

ಧಾರವಾಡ ಮೇ27- ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘವು ತಮ್ಮ ಎಲ್ಲಾ ಸದಸ್ಯ ಶಿಕ್ಷಕಿಯರನ್ನು ಸೋಶಿಯಲ್ ಮೀಡಿಯ ಬಳಸಿ ಒಂದೆಡೆ ಸೇರಿಸುವ ಹಾಗೂ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಹೆಜ್ಹೆ ಇಟ್ಟಿದೆ.ಕುಟುಂಬ ಎಂಬ ಆಪ್ ನೊಂದಿಗೆ ಒಪ್ಪಂದ ಮಾಡಿಕೊಂಡು ತನ್ನೆಲ್ಲ ಸದಸ್ಯರನ್ನು ಒಂದೇ ಸೂರಿನಡಿ ತರುವಲ್ಲಿ ಯಶಸ್ವಿಯಾಗಿದೆ.ಇದರಿಂದ ಸಂಘಟನೆ ಬಲಗೊಳಿಸಲು ಸುಲಭಸಾದ್ಯವಾಗಲಿದೆ.
ಹೌದು ಇತ್ತೀಚೆಗೆ ಅಭಿವೃದ್ದಿಪಡಿಸಲಾಗಿರುವ ಭಾರತ ಮೂಲದ ‘ಕುಟುಂಬ’ ಎಂಬ ಅಪ್ಲಿಕೇಶನ್ ಎಲ್ಲ ಕಡೆ ಎಲ್ಲರ ಮನಸಲ್ಲಿ ಮನೆ ಮಾಡಿದೆ.ಇದು ಒಂದು ಭಾರತದ ಬಹುದೊಡ್ಡ ಸೋಶಿಯಲ್ ಅಪ್ಲಿಕೇಶನ್ ಆಗಿದ್ದು ಸಂಘಟನೆ ಸಲುವಾಗಿಯೇ ಸಿದ್ದಪಡಿಸಲಾಗಿದೆ. ವಿವಿಧ ವಿನ್ಯಾಸದ ಗುಣಲಕ್ಷಣ ಹೊಂದಿರುವ ಹಾಗೂ ಯಾವುದೇ ಸಂಘಟನೆಗಳು ಸುಲಭವಾಗಿ ಬಳಕೆ ಮಾಡಿ ಎಲ್ಲಾ ಸದಸ್ಯರನ್ನು ಒಂದೇ ಸೂರಿನಡಿ ಸೇರಿಸುವ ಹಾಗೂ ದಿನನಿತ್ಯ ಎಲ್ಲರಲ್ಲಿಯೂ ಕ್ಷಣಾರ್ಧದಲ್ಲಿ ಸಂಪರ್ಕ ಕಲ್ಪಿಸುವ ರೀತಿ ಅಭಿವೃದ್ದಿ ಮಾಡಲಾಗಿದೆ.ನೊಂದಣಿ ಆದ ಸದಸ್ಯರ,ಗುರುತಿನ ಚೀಟಿ, ಉತ್ತಮ ಪ್ರೋತ್ಸಾಹ ನೀಡಿದವರಿಗೆ ಪ್ರಶಂಸ ಪತ್ರಗಳು ಸ್ವಯಂಚಾಲಿತವಾಗಿ ಮುದ್ರಣಗೊಳ್ಳುತ್ತವೆ.
ಫೇಸ್ ಬುಕ್ ನಂತೆಯೇ ಇದೂ ಕೂಡ ನೊಂದಾಯಿತ ಸದಸ್ಯರ ಸಂಖ್ಯೆಗೆ ಯಾವುದೇ ಮಿತಿ ಇರುವುದಿಲ್ಲ…ಲಕ್ಷಾಂತರ ಸದಸ್ಯರು ಒಂದೇ ಸಂಘಟನೆ ಪ್ಲಾಟ್ ಫಾರಂ ಲಿ ಸೇರ್ಪಡೆಯಾಗಿ ಚಾಟಿಂಗ್,ಶೇರಿಂಗ್,ಕಾಮೆಂಟ್,ಲೈಕ್,ಹಾಗೂ ,ಚರ್ಚೆ,ಪ್ರಕಟಣೆ, ಆಡಿಯೊ ವೀಡಿಯೊ ಕಾಲ್,ವೆಬಿನಾರ್ ಮೀಟ್,ಕಾನ್ಫರೆನ್ಸ್ ಇತರೆ ಎಲ್ಲದಕೂ ಒಂದೇ ಆಪ್ ನಲ್ಲಿ ಅವಕಾಶ ಕಲ್ಪಿಸಲಾಗಿದೆ. ವಾಟ್ಸಪ್ ರೀತಿ ಪೋನ್ ಸ್ಟೋರೆಜ್ ಸಮಸ್ಯೆ ಇದರಲ್ಲಿಲ್ಲ. ಹಾಗೂ ಉತ್ತಮ ಡೆಟಾ ಶೇರಿಂಗ್ ಭದ್ರತೆ ಕೂಡ ಒದಗಿಸಲಾಗಿದೆ.
ರಾಜ್ಯದ ಅಥವಾ ರಾಷ್ಟ್ರದ ಯಾವುದೇ ಸರ್ಕಾರಿ ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕಿಯರು ಈ ಕೆಳಗಿನ ಲಿಂಕ್ ಬಳಸಿ ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಂಡು ತಮ್ಮ ಮೊಬೈಲ್ ಸಂಖ್ಯೆ,ಹೆಸರು ತಮ್ಮ ಕೆಲಸ ಮಾಡುವ ತಾಲ್ಲೂಕಿನ ಪಿನ್ ಕೊಡ್ ಬಳಸಿ ರಿಜಿಸ್ಟರ್ ಮಾಡಿಕೊಳ್ಳಲು ಎಲ್ಲರಿಗೂ ಸೂಚಿಸಿದೆ.
https://kutumb.app/karnataka-savitribhai-shikshakiyar-sanga?ref=R3SE3
ತಮಗೆ ಯಾವುದೇ ತಾಂತ್ರಿಕ ಅಡಚಣೆ ಉಂಟಾದಲ್ಲಿ ಅಥವಾ ಹೆಚ್ಚಿನ ಮಾಹಿತಿಗೆ ತಮ್ಮ ಜಿಲ್ಲೆಯ/ ತಾಲ್ಲೂಕಿನ ಪದಾಧಿಕಾರಿಗಳನ್ನು ಸಂಪರ್ಕಿಸಲು ತಿಳಿಸಿದೆ.
ಅಪ್ಲಿಕೇಷನ್ ಅಳವಡಿಸಿಕೊಂಡ 24 ಗಂಟೆಯ ಅವಧಿಯಲ್ಲಿ ಸಾವಿರಕ್ಕೂ ಹೆಚ್ಚು ಶಿಕ್ಷಕಿಯರು ನೊಂದಾವಣೆ ಮಾಡಿಕೊಂಡು ಗುರುತಿನ ಚೀಟಿ ಪಡೆದಿರುವುದು ಸಂತೋಷದ ಸಂಗತಿಯಾಗಿದೆ.
ಎಂದು ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಲತಾ.ಎಸ್.ಮುಳ್ಳೂರ ರವರು ಹರ್ಷ ವ್ಯಕ್ತಪಡಿಸಿದ್ದಾರೆ.ಹಾಗೂ ರಾಜ್ಯದ ಎಲ್ಲಾ ಸರ್ಕಾರಿ ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕಿಯರು ಕುಟುಂಬ ಆಪ್ ಡೌನ್‌ಲೋಡ್ ಮಾಡಿಕೊಂಡು ನಮ್ಮ ಸಂಘದ ಈ ಮೇಲಿನ ಲಿಂಕ್ ಬಳಸಿ ನೊಂದಣಿ ಮಾಡಿಕೊಳ್ಳಲು ತಿಳಿಸಿದ್ದಾರೆ.

